ಬೀದರ್ | ಯತ್ನಾಳ್ ಶಾಸಕ ಸ್ಥಾನ ರದ್ದುಗೊಳ್ಳಿಸಲು ಡಾ. ಶ್ರೀಚನ್ನಬಸವನಾಂದ ಸ್ವಾಮಿಜಿ ಆಗ್ರಹ : ಡಿ.3 ರಂದು ಪ್ರತಿಭಟನೆ
ಬೀದರ್ : ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ವಿಜಯಪುರ ಶಾಸಕ ಬಸವಣಗೌಡ ಪಾಟೀಲ್ ನಿಂದನಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿ, ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಡಿ.3ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ಬೀದರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಹೆಸರು ಇಟ್ಟುಕೊಂಡು ನಾನೆ ಬಸವಣ್ಣ ಎಂದು ಹೇಳಿಕೊಂಡಿದ್ದು, ಬಸವಣ್ಣನವರ ಕುರಿತು ಅವಹೇಳನ ಮಾಡುವ ಮೂಲಕ ದುರಹಂಕಾರ ಮೆರೆದಿದ್ದಾರೆ. ಅಧಿಕಾರದ ಮಥ ನೆತ್ತಿಗೆ ಏರಿದೆ. ʼವಿನಾಶ ಕಾಲಕ್ಕೆ ವಿಪರೀತ ಬುದ್ಧಿʼ ಎಂಬಂತೆ ವರ್ತಿಸಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬಸವಣಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಖಂಡಿಸಿ, ಅವರನ್ನು ಶಾಸಕ ಸ್ಥಾನದಿಂದ ರದ್ದುಗೊಳ್ಳಿಸಬೇಕೆಂದು ಒತ್ತಾಯಿಸಿ ಡಿ.3 ರಂದು ಬಸವ ಮಂಟಪದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನೆ ನಡೆಸುವ ತೀರ್ಮಾನ ಲಿಂಗಾಯತ ಮಹಾ ಸಭಾ ತೆಗೆದುಕೊಂಡಿದ್ದು, ಎಲ್ಲಾ ಬಸವ ಅಭಿಮಾನಿಗಳ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.