ಬೀದರ್ | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿಯಲ್ಲಿ ಲೋಪದೋಷ ಆರೋಪ : ಕ್ರಮಕ್ಕೆ ಆಗ್ರಹ
Update: 2024-12-04 11:27 GMT
ಬೀದರ್ : ಭಾಲ್ಕಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಯಲ್ಲಿ ಲೋಪದೋಷವಾಗಿದೆ ಎಂದು ಆರೋಪಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಾದಿಗ ಮೀಸಲಾತಿ ಸಮಿತಿಯ ಅಧ್ಯಕ್ಷ ಸಚಿನ್ ಅಂಬೆಸಾಂಗವಿ ಒತ್ತಾಯಿಸಿದ್ದಾರೆ.
ಅಂಗನವಾಡಿ ಹುದ್ದೆಗಳ ನೇಮಕಾತಿಯಲ್ಲಿ ಸ್ಪರ್ಧಾರ್ಥಿಗಳ ಮೂಲ ದಾಖಲಾತಿಗಳು ಒಂದು ಸ್ಥಳದಲ್ಲಿದ್ದರೆ ಅವರಿಗೆ ಇನ್ನೊಂದು ಸ್ಥಳದಲ್ಲಿ ನೇಮಕಾತಿ ಮಾಡಲಾಗಿದೆ. ಇದೇ ರೀತಿ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಇನ್ನು ಹಲವಾರು ಲೋಪದೋಷಗಳು ಕಂಡು ಬಂದಿದೆ. ಆದುದರಿಂದ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ವೇಳೆ ಪ್ರವೀಣ್ ಮೊರೆ, ಪ್ರೇಮ್ ಮೇತ್ರೆ, ಸಿದ್ದಾರ್ಥ್ ಪ್ಯಾಗೆ, ಮನೋಜ್ ಕಾಂಬ್ಳೆ, ಸಲ್ಮಾನ್, ದೀಕ್ಷಿತ್, ತುಕಾರಾಮ್ ಹಾಗೂ ಮತ್ತಿತರರು ಭಾಗವಹಿಸಿದ್ದರು.