ಬೀದರ್ | ಅಖಿಲ ಕರ್ನಾಟಕ 108 ಆಂಬ್ಯುಲೆನ್ಸ್ ನೌಕರರ ಪದಾಧಿಕಾರಿಗಳ ನೇಮಕ
Update: 2025-03-12 15:56 IST
ಬೀದರ್ : ನಗರದ ಹಳೆ ಆಸ್ಪತ್ರೆಯ ಅಖಿಲ ಕರ್ನಾಟಕ 108 ಆಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘದ ಜಿಲ್ಲಾ ಮಾಸಿಕ ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು.
ಈ ನೇಮಕ ಪ್ರಕ್ರಿಯೆಯು ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಹಳ್ಳಿ ಅವರ ನೇತೃತ್ವದಲ್ಲಿ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ಅಬ್ರಹಾಂ ಸುಗರಕರ್, ಜಿಲ್ಲಾ ಉಪಾಧ್ಯಕ್ಷರಾಗಿ ಶಾಲಿವಾನ್ ಬಂಗಾರೆ ಜಿಲ್ಲಾ ಜಂಟಿ ಕಾರ್ಯದರ್ಶಿಗಳಾಗಿ ರಾಜಶೇಖರ್, ವಿದ್ಯಾಸಾಗರ್, ನಾಗಪ್ಪಾ, ಚಿಟಗುಪ್ಪಾ ತಾಲ್ಲೂಕು ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಸ್ವಾಮಿ ಇವರನ್ನು ಆಯ್ಕೆ ಮಾಡಿ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಂಟೆಪ್ಪಾ ಧನ್ನೂರೆ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ರಹೆಬಮ್, ಸದಸ್ಯರುಗಳಾದ ಶಿವಕುಮಾರ್ ಸಿಂಧೆ, ಜಾರ್ಜ್, ದೀಪಕ್, ವಿಜಯಕುಮಾರ್ ಭಾಲ್ಕಿ, ಶ್ರೀಮಂತ್, ಸತೀಶ್ ಹಾಗೂ ವನಶ್ರೀ ಸೇರಿದಂತೆ ಜಿಲ್ಲಾ ಕಮಿಟಿ, ತಾಲ್ಲೂಕಾಧ್ಯಕ್ಷ ಮತ್ತು ಇತರರು ಉಪಸ್ಥಿತರಿದ್ದರು.