ಬೀದರ್: ಬಸವಣ್ಣನ ಮೂರ್ತಿಗೆ ಅವಮಾನ; ರಸ್ತೆ ತಡೆದು ಪ್ರತಿಭಟನೆ
Update: 2025-01-15 06:34 GMT
ಬೀದರ್ : ಬಸವಣ್ಣ ಪ್ರತಿಮೆಯ ಕೈ ಮುರಿದ ಘಟನೆ ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ಬಳಿ ನಡೆದಿದ್ದು, ಕೃತ್ಯದ ವಿರುದ್ಧ ಆಕೋಶಗೊಂಡ ಬಸವ ಅನುಯಾಯಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಗಳವಾರ ತಡ ರಾತ್ರಿಯ ಸಮಯದಲ್ಲಿ ಕಿಡಿಗೇಡಿಗಳು ಬಸವಣ್ಣನ ಪ್ರತಿಮೆಯ ಕೈ ಮುರಿದಿದ್ದಾರೆ ಎನ್ನಲಾಗಿದೆ. ಇದರ ವಿರುದ್ಧ ದಾಡಗಿ ಗ್ರಾಮದ ಬಸವ ಅನುಯಾಯಿಗಳು ಭಾಲ್ಕಿ-ಹುಮನಾಬಾದ್-ಬಸವಕಲ್ಯಾಣ ಮೂರು ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮೇಲೆ ಬೆಂಕಿ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ಮುಂದುವರೆಸಿದ ಬಸವ ಅನುಯಾಯಿಗಳು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಸ್ಠಾಧಿಕಾರಿಗಳು ಸ್ಥಳಕ್ಕೆ ತಕ್ಷಣವೇ ಬರಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಬಸವಣ್ಣನ ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.