ಬೀದರ್ | ಏ.4 ರಂದು ʼಎಲ್ಲರ ಅಂಬೇಡ್ಕರ್ ಸಂಘಂ ಶರಣಂ ಗಚ್ಚಾಮಿʼ ನಾಟಕ ಪ್ರದರ್ಶನ : ಅನಿಲಕುಮಾರ್ ಬೆಲ್ದಾರ್

Update: 2025-03-29 21:14 IST
Photo of Press meet
  • whatsapp icon

ಬೀದರ್ : ಏ.4 ರಂದು ಸಾಯಂಕಾಲ 5:.30 ಗಂಟೆಗೆ ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ʼಎಲ್ಲರ ಅಂಬೇಡ್ಕರ್ ಸಂಘಂ ಶರಣಂ ಗಚ್ಚಾಮಿʼ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂವಿಧಾನ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ಬೆಲ್ದಾರ್ ಹೇಳಿದರು.

ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈದರಬಾದ್‌ ನ ಅಭ್ಯುದಯ ಆರ್ಟ್ಸ್ ಅಕಾಡೆಮಿ ಅವರ ಸಹಯೋಗತ್ವದಲ್ಲಿ ಜರುಗಲಿರುವ ನಾಟಕ ಕಾರ್ಯಕ್ರಮವು 90 ನಿಮಿಷಗಳ ಕಾಲ ನಿರಂತರವಾಗಿ ನಡೆಯಲಿದೆ. ಇದರಲ್ಲಿ ಬುದ್ದ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವಗಳು ಪ್ರಚಲಿತವಾಗಿವೆ ಎಂದರು.

ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ರಾಜ್ಯದ ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ ಖಂಡ್ರೆ, ಜಿಲ್ಲೆಯ ಇತರೆ ಜನಪ್ರತಿನಿಧಿಗಳು, ಪಕ್ಷಾತೀತವಾಗಿ ಎಲ್ಲರನ್ನು ಅಹ್ವಾನಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ತೆಲಂಗಾಣ ಹಾಗೂ ಆಂದ್ರಪ್ರದೇಶದಲ್ಲಿ ಈ ನಾಟಕ ಪ್ರದರ್ಶನಗೊಂಡಿದ್ದು, ಜನರ ಮೆಚ್ಚುಗೆ ಗಳಿಸಿದೆ. ಅಲ್ಲಿಯ ಸರ್ಕಾರ ಕೂಡ ಸಹಕರಿಸಿದೆ. ಅಲ್ಲಿ ಈ ನಾಟಕ ತೆಲುಗಿನಲ್ಲಿ ಪ್ರದರ್ಶನ ಮಾಡಲಾಗಿತ್ತು. ಅದನ್ನು ಇವಾಗ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಅನುವಾದಿಸಿ ಪ್ರದರ್ಶನ ಮಾಡಲಾಗುತ್ತಿದೆ. ಅಂಬೇಡ್ಕರರು ಯಾವುದೇ ಜಾತಿಗೆ ಸೀಮಿತವಲ್ಲದ ಮಹಾನುಭಾವರು. ಎಲ್ಲರಿಗೂ ಬೇಕಾದ ನೇತಾರ. ಹಾಗಾಗಿ ಜಿಲ್ಲೆಯ ಎಲ್ಲ ಚಿಂತಕರು, ಸಾಹಿತಿಗಳು, ವಿದ್ವಾಂಸರು, ಶಿಕ್ಷಣ ಪ್ರೇಮಿಗಳು, ಸಂಘಟನೆಗಳ ಪ್ರಮುಖರಲ್ಲದೇ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಪ್ರಮುಖ ಸಾಹಿತಿ, ಚಿಂತಕರು ಹಾಗೂ ಪ್ರಗತಿಪರರು ಈ ನಾಟಕ ಕಾರ್ಯಕ್ರಮ ವೀಕ್ಷಿಸಲು ಆಗಮಿಸುತ್ತಿದ್ದಾರೆ. ವಿಶೇಷ ವ್ಯಕ್ತಿಗಳನ್ನು ಪಾಸ್ ನೀಡುವ ಮೂಲಕ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹುಮನಾಬಾದ್ ಮಾಜಿ ತಾಲ್ಲೂಕು ಪಂಚಾಯತ್‌ ಅಧ್ಯಕ್ಷ ರಮೇಶ್ ಡಾಕುಳಗಿ ಮಾತನಾಡಿ, ಬೆಂಗಳೂರಿನ ವಿಕಾಸ ಸೌಧದ ಮುಂಭಾಗದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸ್ಪೂರ್ತಿ ಸೌಧ ಎಂಬ ಹೆಸರಿನ ಅಂಬೇಡ್ಕರ್ ಪ್ರತಿಮೆ ಹಾಗೂ ವಸ್ತು ಸಂಗ್ರಹಾಲಯ ನಿರ್ಮಿಸಲು ಮುಖ್ಯಮಂತ್ರಿಗಳು ಮುಂದಾಗಿರುವುದು ತುಂಬ ಖುಷಿ ವಿಚಾರವಾಗಿದೆ. ಅದಕ್ಕೆ 87 ಕೋಟಿ ರೂ. ಅನುದಾನ ಸಹ ಒದಗಿಸಿ ನಮ್ಮ ಬಹು ದಿನಗಳ ಕನಸ್ಸು ಸಾಕಾರಗೊಳಿಸಿದ್ದಾರೆ ಎಂದು ನುಡಿದರು.

ದಲಿತ ಮುಖಂಡ ಬಾಬುರಾವ್ ಪಾಸ್ವಾನ್ ಮಾತನಾಡಿ, ಈಗಾಗಲೇ ಸರ್ಕಾರ ಒಳಮೀಸಲಾತಿಗೋಸ್ಕರ ನಾಗಮೋಹನದಾಸ್ ಸಮಿತಿಗೆ ಎರಡು ತಿಂಗಳು ಕಾಲಾವಕಾಶ ನೀಡಿದೆ. ಮತ್ತೊಮ್ಮೆ ರಾಜ್ಯಾದ್ಯಂತ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ದತ್ತಾಂಶ ಸಂಗ್ರಹಿಸಿ ಎಲ್ಲ ಜಾತಿಗಳ ಪುನರ್ ಸರ್ವೇ ಕಾರ್ಯ ನಡೆಸಿ ಒಳ ಮೀಸಲಾತಿ ಜಾರಿ ಮಾಡಲು ತಿರ್ಮನಿಸಲಾಗಿದೆ. ಸರ್ಕಾರದ ಈ ಕ್ರಮ ಸ್ವಾಗತಾರ್ಹ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಶ್ರೀಪತರಾವ್ ದೀನೆ, ಶಿವಕುಮಾರ್ ನೀಲಿಕಟ್ಟಿ, ಪ್ರದೀಪ್ ನಾಟೇಕರ್, ಸಂದೀಪ್ ಕಾಂಟೆ, ರಮೇಶ್ ಮಂದಕನಳ್ಳಿ ಹಾಗೂ ನರಸಿಂಗ್ ಸಾಮ್ರಾಟ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News