ಬೀದರ್ : ಬಸವಕಲ್ಯಾಣದ ನಗರಸಭೆ ಮಹಿಳಾ ಸಿಬ್ಬಂದಿ ಹತ್ಯೆ
Update: 2025-03-31 22:17 IST

ಬೀದರ್ : ಬಸವಕಲ್ಯಾಣದ ನಗರಸಭೆ ಮಹಿಳಾ ಸಿಬ್ಬಂದಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.
ನಗರದ ಷಾ ಹುಸೇನ್ ಗಲ್ಲಿಯ ನಿವಾಸಿ ರೇಷ್ಮಾ ಶೇಕ್ ಹೈದರ್ (34) ಕೊಲೆಯಾದ ಮಹಿಳೆ.
ರೇಷ್ಮಾ ಅವರು ಕಳೆದ ಕೆಲ ವರ್ಷಗಳಿಂದ ನಗರಸಭೆಯಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದು, ತನ್ನ ತಾಯಿಯ ಜೊತೆಗೆ ನಗರದ ಷಾ ಹುಸೇನ್ ಗಲ್ಲಿಯಲ್ಲಿ ವಾಸ ಮಾಡುತ್ತಿದ್ದರು. ಅವರು ಶನಿವಾರ ರಾತ್ರಿ ಕೊಲೆ ನಡೆದಿದ್ದು, ರವಿವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಸುದ್ಧಿ ತಿಳಿದು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಸಿಪಿಐ ಅಲಿಸಾಬ್, ಪಿಎಸ್ಐ ಸುರೇಶ್ ಹಜ್ಜರಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.