ಬೀದ‌ರ್ | ನ್ಯಾಯಾಧೀಶರ ಮನೆಯಲ್ಲಿಯೇ ಕಳ್ಳತನ : ಪ್ರಕರಣ ದಾಖಲು

Update: 2025-04-02 23:23 IST
ಬೀದ‌ರ್ | ನ್ಯಾಯಾಧೀಶರ ಮನೆಯಲ್ಲಿಯೇ ಕಳ್ಳತನ : ಪ್ರಕರಣ ದಾಖಲು
  • whatsapp icon

ಬೀದ‌ರ್ : ನ್ಯಾಯಾಧೀಶರ ಮನೆಯಲ್ಲಿಯೇ ಕಳ್ಳತನ ಮಾಡಿ ಸುಮಾರು 7 ಲಕ್ಷ ರೂ.ಗಿಂತಲೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಗರದ ಜನವಾಡ ರಸ್ತೆಯಲ್ಲಿರುವ ನ್ಯಾಯಾಧೀಶರ ವಸತಿ ಗೃಹದಲ್ಲಿ ನಡೆದಿದೆ.

ನಗರದ ಜನವಾಡ ರಸ್ತೆಯಲ್ಲಿನ ವಸತಿ ಗೃಹದಲ್ಲಿರುವ 2ನೇ ಹೆಚ್ಚುವರಿ ಸಿವಿಲ್ ಮತ್ತು 2ನೇ ಜೆಎಂಎಸ್ಸಿ ನ್ಯಾಯಾಲಯದ ನ್ಯಾಯಾಧೀಶ ಎಂ.ಡಿ.ಶಾಯಿಜ್ ಚೌಟಾಯಿ ಅವರ ಮನೆಗೆ ನುಗ್ಗಿದ ಕಳ್ಳರು ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದು, ಪರಾರಿಯಾಗಿದ್ದಾರೆ.

ರಮಝಾನ್‌ ಹಬ್ಬದ ಹಿನ್ನಲೆಯಲ್ಲಿ ನ್ಯಾಯಾಧೀಶರು ತಮ್ಮ ಕುಟುಂಬದ ಸಹಿತ ಮಾ.29 ರಂದು ನಗರದಲ್ಲಿರುವ ತಮ್ಮ ಮನೆಗೆ ಬೀಗ ಹಾಕಿ ಸ್ವಗ್ರಾಮವಾದ ಕೊಪ್ಪಳಕ್ಕೆ ತೆರಳಿದ್ದರು. ಆ ವೇಳೆಯಲ್ಲಿ ಕಳ್ಳರು ನ್ಯಾಯಧೀಶರ ಮನೆಗೆ ನುಗ್ಗಿ ಚಿನ್ನ ದೋಚಿದ್ದಾರೆ ಎನ್ನಲಾಗಿದೆ.

ನಾಲ್ವರು ಕಳ್ಳರು ಹಿಂಭಾಗದಿಂದ ಬಂದು ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನ್ಯಾಯಾಧೀಶರ ದೂರಿನ ಮೇರೆಗೆ ನೂತನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News