ಬೀದರ್ | ಎ.11 ರಿಂದ SPICON-4 ರಾಷ್ಟ್ರೀಯ ಸಮ್ಮೇಳನ : ವೀರಶೆಟ್ಟಿ ಮಣಗೆ

Update: 2025-04-07 16:15 IST
Photo of Press meet
  • whatsapp icon

ಬೀದರ್ : ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅವರ ಆಶ್ರಯದಲ್ಲಿ ಎ.11, 12 ಮತ್ತು 13 ರಂದು ನಗರದ ಲಾವಣ್ಯ ಕಾನ್ವೆನ್ಷನ್ ಸೆಂಟರ್‌ನಲ್ಲಿ SPICON-4 ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದು ಎಸಿಸಿಇ ಅಧ್ಯಕ್ಷ ವೀರಶೆಟ್ಟಿ ಮಣಗೆ ಅವರು ತಿಳಿಸಿದ್ದಾರೆ.

ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೂರು ದಿನಗಳ ಸಮ್ಮೇಳನದಲ್ಲಿ ಕಟ್ಟಡ ಸಾಮಗ್ರಿ, ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ SPICON-4 ಸ್ಮರಣಿಕೆ ಬಿಡುಗಡೆ ಕೂಡ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಎ.11 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, ಸಂಸದ ಸಾಗರ್ ಖಂಡ್ರೆ ಅವರು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಪಾಲಿಕೆ ಮತ್ತು ಹಜ್ ಇಲಾಖೆಯ ಸಚಿವ ರಹೀಮ್ ಖಾನ್, ಗೌರವ ಅತಿಥಿಗಳಾಗಿ ಶಾಸಕ ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ ಹಾಗೂ ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯ ಭಾಷಣಕಾರರಾಗಿ ಡಾ.ಎಸ್.ಪಿ. ಅಂಚೂರಿ, ಅತಿಥಿಗಳಾಗಿ ಸರ್ದಾರ್ ಬಲಬೀರ್ ಸಿಂಗ್, ಬಸವರಾಜ ದೇಶಮುಖ್ ಹಾಗೂ ಸಂತೋಷ್ ಕುಮಾರ್ ತಾಲಂಪಳ್ಳಿ ಉಪಸ್ಥಿತರಿರಲಿದ್ದಾರೆ. ಹಾಗೆಯೇ ಜಿಲ್ಲೆಯ ಎಲ್ಲ ಇಂಜಿನಿಯರ್ ಕಾಲೇಜಿನ ಸಿವಿಲ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಅಶೋಕ್ ಉಪ್ಪೆ, ಓಂಕಾರ್ ಪಾಟೀಲ್, ಶಿವಕುಮಾರ್, ಪ್ರದೀಪ್ ಕಾಡವಾದೆ, ಅಮಿತ್ ನಾಗುರೆ, ಮಹೇಶ್ ಹಾಗೂ ದಿಲೀಪ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News