ಬೀದರ್: ಮೆಡಿಕಲ್ ಸ್ಟೋರ್ ನಲ್ಲಿ ಬೆಂಕಿ ಅವಘಡ; ಅಪಾರ ಹಾನಿ
Update: 2025-04-12 20:59 IST

ಬೀದರ್: ಹುಲಸೂರ ಪಟ್ಟಣದ ಗಾಂಧಿ ವೃತ್ತದಲ್ಲಿರುವ ಮೇಡಿಕಲ್ ಸ್ಟೋರ್ ವೊಂದರಲ್ಲಿ ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಮೌಲ್ಯದ ವಸ್ತುಗಳು ಹಾನಿಯಾದ ಘಟನೆ ಶುಕ್ರವಾರ ತಡರಾತ್ರಿ ಜರುಗಿದೆ.
ಈ ಮೆಡಿಕಲ್ ಚಂದ್ರಕಾಂತ್ ನಂಜವಾಡೆ ಅವರಿಗೆ ಸೇರಿದ್ದಾಗಿದೆ ಎನ್ನಲಾಗಿದೆ.
ಶುಕ್ರವಾರ ತಡರಾತ್ರಿ ಸ್ಥಳಿಯ ನಿವಾಸಿಗಳು ಮೆಡಿಕಲ್ ಸಮೀಪ ಸಾಗುತ್ತಿದ್ದಾಗ ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ನೋಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಅಂಗಡಿಯಲ್ಲಿದ್ದ ಔಷಧಿಗಳು, ಎರಡು ಪ್ರಿಜ್, ಕುರ್ಚಿ, ಟೇಬಲ್ ಹಾಗೂ ನಗದು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.