ಬೀದರ್ | ಸಮತಾ ಸೈನಿಕ ದಳ ಸಮಿತಿ ಪದಾಧಿಕಾರಿಗಳ ಆಯ್ಕೆ
Update: 2025-04-11 16:12 IST

ಬೀದರ್: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಇರುವ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಸಮಿತಿಯ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷರಾಗಿ ನ್ಯಾಯವಾದಿ ಶಂಕರ ಫೀರಂಗೆ, ಕಾರ್ಯಾಧ್ಯಕ್ಷರಾಗಿ ಕಾಶಿನಾಥ ಕಟ್ಟಿಮನಿ, ಉಪಾಧ್ಯಕ್ಷರಾಗಿ ಪವನ ಶಿಂಧೆ, ಪ್ರಧಾನ ಕಾರ್ಯದರ್ಶಿಯಾಗಿ ಸ್ಟೀಫನ್ ಬೋರೆ, ಕಾರ್ಯದರ್ಶಿಯಾಗಿ ಪಾಂಡುರಂಗ ಜಿ. ಕಾಂಬಳೆ, ಸಹ ಕಾರ್ಯದರ್ಶಿಯಾಗಿ ಪ್ರೀತಮ್ ನಾಟಿಕರ್, ಸಂಘಟನಾ ಕಾರ್ಯದರ್ಶಿಯಾಗಿ ವಿಷ್ಣು ಸೋನಿ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಸಚೀನ ಸಿಂಗಾರೆ, ಸದಸ್ಯರಾಗಿ ಎಲ್ಲಪ್ಪ ಚಿದ್ರಿ, ಭಗವಂತ, ಪುನೀತ ಕ್ಯಾದಾ, ಕಾಮು ಚಿದ್ರಿ, ಸಲಹೆಗಾರರಾಗಿ ಪ್ರೇಮ ನಾಟಿಕರ್, ಹೇಮಂತರಾವ ಫುಲೆ, ಮಹೇಶ (ಮೋಜಸ್) ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.