ಬೀದರ್ | ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ ಕಳವು; ಆರೋಪಿಗಳ ಬಂಧನ

Update: 2025-04-07 23:41 IST
ಬೀದರ್ | ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ ಕಳವು; ಆರೋಪಿಗಳ ಬಂಧನ
  • whatsapp icon

ಬೀದರ್ : ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರಿ ಶಾಲೆ ಮೇಲೆ‌ ಅಳವಡಿಸಿದ್ದ 2 ನೀರಿನ ಟ್ಯಾಂಕ್‌ ಕಳವು ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬಸವಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮದಲ್ಲಿ ನಡೆದಿದೆ.

ಉಜಳಂಬ ಗ್ರಾಮದ‌ ನಿವಾಸಿಗಳಾದ ಬಾಳು, ರವಿ ಭೂವಿ ಹಾಗೂ ಬಲಭೀಮ್ ಶಿಂಧೆ ಎಂಬ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಮಾ.24 ರಂದು ಉಜಳಂಬ ಗ್ರಾಮದ‌ ಸರ್ಕಾರಿ ಪ್ರಾಥಮಿಕ ಶಾಲೆ‌ ಮೇಲೆ ಅಳವಡಿಸಿದ್ದ 2 ನೀರಿನ ಟ್ಯಾಂಕ್‌ ಗಳನ್ನು ಇವರು ಕಳವು ಮಾಡಿದ್ದರು. ಈ ಕುರಿತು ಶಾಲೆಯ ಶಿಕ್ಷಕರು ದೂರು ನೀಡಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಿ, 2 ನೀರಿನ ಟ್ಯಾಂ ಮತ್ತು ಕಳವು ಮಾಡುವುದಕ್ಕೆ ಬಳಸಿದ ಗೂಡ್ಸ್ ಆಟೋ ಒಂದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ‌ ಕುರಿತು ಮಂಠಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News