ವಿಶ್ವಕಪ್‌ ನಲ್ಲಿ ವೇಗದ ಶತಕ ದಾಖಲಿಸಿದ ಗ್ಲೆನ್‌ ಮ್ಯಾಕ್ಸ್‌ ವೆಲ್‌

Update: 2023-10-25 12:34 GMT

PHOTO : Cricketworldcup.com

ಹೊಸದಿಲ್ಲಿ : ಇಲ್ಲಿನ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನೆದರ್‌ ಲ್ಯಾಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ ವೆಲ್‌ 40 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ, ವಿಶ್ವಕಪ್‌ ನಲ್ಲಿ ಅತೀ ವೇಗದ ಶತಕ ದಾಖಲಿಸಿದ ಸಾಧನೆ ಮಾಡಿದರು. ಈ ಹಿಂದೆ ದಕ್ಷಿಣ ಆಫ್ರಿಕಾದ ಐಡೆನ್‌ ಮಾರ್ಕರಮ್‌ 2023 ರ ವಿಶ್ವಕಪ್‌ ನಲ್ಲಿ ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ದಾಖಲಿಸಿ ಸಾಧನೆ ಮಾಡಿದ್ದರು. 

ಸ್ಪೋಟಕ ಬ್ಯಾಟಿಂಗ್‌ ಮೂಲಕ 44 ಎಸೆತಗಳಲ್ಲಿ 8 ಸಿಕ್ಸರ್‌, 9 ಬೌಂಡರಿಗಳೊಂದಿಗೆ 106 ರನ್‌ ಗಳಿಸಿದ ಮ್ಯಾಕ್ಸ್‌ ವೆಲ್‌ ದಿಲ್ಲಿಯ ಕ್ರಿಕೆಟ್‌ ಪ್ರೇಮಿಗಳಿಗೆ ರಸದೌತಣ ನೀಡಿದರು. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News