ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು: ಆಸ್ಕರ್ ನಾಮನಿರ್ದೇಶನ ಮತದಾನದ ಅವಧಿ ವಿಸ್ತರಣೆ

Update: 2025-01-09 08:24 GMT

Screegrab:X/@HotshotWake

ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ನಲ್ಲಿನ ಕಾಳ್ಗಿಚ್ಚಿನ ಪರಿಣಾಮ ಪ್ರತಿಷ್ಠಿತ ಆಸ್ಕರ್ ನಾಮನಿರ್ದೇಶನ ಮತದಾನದ ಮೇಲೂ ಆಗಿದೆ.

5,000 ಎಕರೆಗೂ ಹೆಚ್ಚು ಪ್ರದೇಶವನ್ನು ಆವರಿಸಿದ ಭೀಕರ ಕಾಳ್ಗಿಚ್ಚಿನಿಂದಾಗಿ ಕನಿಷ್ಠ ಐವರು ಮೃತಪಟ್ಟಿದ್ದು, ಲಾಸ್ ಏಂಜಲೀಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ 49,000ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಕಾಳ್ಗಿಚ್ಚಿನ ತೀವ್ರತೆಗೆ ಹಲವಾರು ಕಾರುಗಳು ಮತ್ತು ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ಹೇಳಲಾಗಿದೆ.

ಈ ಕಾಳ್ಗಿಚ್ಚಿನ ಕಾರಣಕ್ಕೆ ಪ್ರತಿಷ್ಠಿತ ಆಸ್ಕರ್ ನಾಮನಿರ್ದೇಶನ ಮತದಾನ ಪ್ರಕ್ರಿಯೆ ವಿಳಂಬಗೊಂಡಿದೆ. ಹೀಗಾಗಿ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್, ಆಸ್ಕರ್ ನಾಮನಿರ್ದೇಶನದ ಮತದಾನ ಪ್ರಕ್ರಿಯೆಯನ್ನು ವಿಸ್ತರಣೆಗೊಳಿಸಿದೆ.

ಈ ಮತದಾನ ಪ್ರಕ್ರಿಯೆಲ್ಲಿ ಸುಮಾರು 10,000 ಅಕಾಡೆಮಿ ಸದಸ್ಯರಿಗೆ ಮತದಾನ ಮಾಡುವ ಅವಕಾಶವಿದೆ. ಜನವರಿ 8ರಂದು ಪ್ರಾರಂಭಗೊಂಡು, ಜನವರಿ 12ರಂದು ಈ ಮತದಾನ ಪ್ರಕ್ರಿಯೆ ಸಂಪೂರ್ಣಗೊಳ್ಳಬೇಕಿತ್ತು. ಆದರೆ, ಇದೀಗ ಈ ದಿನಾಂಕವನ್ನು ವಿಸ್ತರಿಸಲಾಗಿದೆ. ಜನವರಿ 12ರ ಬದಲಿಗೆ ಜನವರಿ 14ರವರೆಗೆ ಈ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಮುನ್ನ ಜನವರಿ 17ಕ್ಕೆ ನಿಗದಿಯಾಗಿದ್ದ ನಾಮನಿರ್ದೇಶನ ಪ್ರಕಟಣೆಯನ್ನು ಇದೀಗ ಜನವರಿ 12ರವರೆಗೆ ವಿಸ್ತರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News