ಪಾಕ್‌ನ ಖೈಬರ್ ಪ್ರಾಂತದಲ್ಲಿ 16 ಕಾರ್ಮಿಕರ ಅಪಹರಣ

Update: 2025-01-09 16:55 GMT

PC : X \ @zarrar_11PK

ಪೇಶಾವರ: ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತೂನ್‌ಖ್ವಾ ಪ್ರಾಂತದಲ್ಲಿ ಗುರುವಾರ ಶಸ್ತ್ರಧಾರಿಗಳ ಗುಂಪೊಂದು ಕನಿಷ್ಠ 16 ಮಂದಿ ಕಾರ್ಮಿಕರನ್ನು ಅಪಹರಿಸಿದೆ. ಈ ಕಾರ್ಮಿಕರು ಸರಕಾರಿ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ತೆರಳುತ್ತಿದ್ದ ಕಾರ್ಮಿಕರಿದ್ದ ವಾಹನವನ್ನು ಶಂಕಿತ ಉಗ್ರರು ಅಪಹರಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಅಪಹರಣಕಾರರು ಖಬಲ್ ಖೇಲ್ ಪ್ರದೇಶದಲ್ಲಿ ಅವರನ್ನು ವಾಹನಕ್ಕೆ ಬೆಂಕಿ ಹಚ್ಚಿರುವುದಾಗಿ ತಿಳಿದುಬಂದಿದೆ. ಆದರೆ ಈ ಅಪಹರಣ ಕೃತ್ಯದ ಹೊಣೆಯನ್ನು ಇದುವರೆಗೆ ಯಾವುದೇ ಶಂಕಿತ ಗುಂಪು ವಹಿಸಿಕೊಂಡಿಲ್ಲ. ನಿಷೇಧಿತ ತೆಹ್ರಿಕಿ ತಾಲಿಬಾನ್ ಪಾಕಿಸ್ತಾನ (ಟಿಟಿಪಿ)ಯು ಗುಂಪು ಈ ಪ್ರದೇಶದಲ್ಲಿ ಸಕ್ರಿಯವಾಗಿದ್ದು, ಈ ಹಿಂದೆಯೂ ಹಲವಾರು ಅಪಹರಣಗಳನ್ನು ನಡೆಸಿರುವುದಾಗಿ ಆರೋಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News