ಸೌದಿ ಯುವರಾಜ ಸಲ್ಮಾನ್ ಅರಬ್ ಜಗತ್ತಿನ ಅತಿ ಪ್ರಭಾವಿ ನಾಯಕ ; ಸಮೀಕ್ಷಾ ವರದಿ
ಜಿದ್ದಾ: 2024ನೇ ವರ್ಷದಲ್ಲಿ ಅರಬ್ ಜಗತ್ತಿನ ಅತ್ಯಂತ ಪ್ರಭಾವಿ ನಾಯಕನಾಗಿ ಸೌದಿಯ ಯುವರಾಜ ಹಾಗೂ ಪ್ರಧಾನಿ ಮುಹಮ್ಮದ್ ಬಿನ್ ಸಲ್ಮಾನ್ ಆಯ್ಕೆಯಾಗಿದ್ದಾರೆ. ಸಲ್ಮಾನ್ ಅವರು 2021ನೇ ಇಸವಿಯಿಂದೀಚೆಗೆ ನಡೆದ ಜನಮತ ಸಮೀಕ್ಷೆಯಲ್ಲಿ ಈ ಮನ್ನಣೆಯನ್ನು ಪಡೆದಿರುವುದು ಇದು ನಾಲ್ಕನೇ ಸಲವಾಗಿದೆ. 2024ರ ಡಿಸೆಂಬರ್ 23ರಿಂದ 2025ರ ಜನವರಿ 8ರವರೆಗೆ ರಶ್ಯ ಟುಡೇ ಮಾಧ್ಯಮ ಸಂಸ್ಥೆಯ ಅರೇಬಿಕ್ ಸುದ್ದಿಜಾಲ ಈ ಸಮೀಕ್ಷೆಯನ್ನು ನಡೆಸಿತ್ತು.
ಸಮೀಕ್ಷೆಯಲ್ಲಿ ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು 31,666 (ಶೇ. 54.54) ಮತಗಳನ್ನು ಅಂದರೆ ಮತಗಳನ್ನು ಪಡೆದಿದ್ದಾರೆ. ಗಾಝಾ ಯುದ್ಧದಲ್ಲಿ ಇಸ್ರೇಲಿ ಪಡೆಗಳ ಗುಂಡಿಗೆ ಬಲಿಯಾದ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಅವರು 3146 (ಶೇ. 10.96) ಮತಗಳನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ. ಅಲ್ಜೀರಿಯದ ಅಧ್ಯಕ್ಷ ಅಬ್ದುಲ್‌ಮಜೀದ್ ಟೆಬ್ಬೌನ್ ಅವರು 1785 (ಶೇ.5.73) ಮತಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ. ಸಮೀಕ್ಷೆಯಲ್ಲಿ ಒಟ್ಟು 31,166 ಮಂದಿ ಭಾಗವಹಿಸಿದ್ದರು.