ಚಾಮರಾಜನಗರ: ನಾಗರಹಾವನ್ನೇ ನುಂಗಿದ ನಾಗರಹಾವು!

Update: 2025-01-06 07:45 GMT

ಚಾಮರಾಜನಗರ: ನಾಗರ ಹಾವು ಮೊಟ್ಟೆ, ಕಪ್ಪೆಯನ್ನು ನುಂಗಿದ ಘಟನೆಯನ್ನು ನೋಡಿದ್ದೇವೆ. ಆದರೆ ನಾಗರಹಾವು ಮತ್ತೊಂದು ನಾಗರಹಾವನ್ನುನುಂಗಿದ ಅಪರೂಪದ ಪ್ರಸಂಗ ಚಾಮರಾಜನಗರ ತಾಲೂಕಿನ ತಾವರಕಟ್ಟೆ ಮೋಳೆ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.

ತಾವರಕಟ್ಟೆಮೋಳೆಯ ಮಹೇಶ್ ಎಂಬವರ ತೋಟದಲ್ಲಿ ನಾಗರಹಾವೊಂದು ಮತ್ತೊಂದು ನಾಗರಹಾವನ್ನು ನುಂಗಿದೆ. ಇದನ್ನು ಕಂಡ ಅಲ್ಲಿನ ನಿವಾಸಿಗಳು ಚಾಮರಾಜನಗರದ ಸ್ನೇಕ್ ಅಶೋಕ್ ರಿಗೆ ಮಾಹಿತಿ ನೀಡಿದ್ದಾರೆ.

ಅದರಂತೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಅಶೋಕ್ ಕೂಡಲೇ ನಾಗರಹಾವನ್ನು ಪರಿಶೀಲಿಸಿದಾಗ ನುಂಗಲ್ಪಟ್ಟ ನಾಗರ ಹಾವನ್ನು ಬಲು ಸೂಕ್ಷ್ಮವಾಗಿ ಹೊರ ಹಾಕಿಸಿದರು. ಆದರೆ ಅಷ್ಟರಲ್ಲಿ ಆ ಹಾವು ಉಸಿರಾಟಕ್ಕೆ ತೊಂದರೆಯಾಗಿ ಮೃತಪಟ್ಟಿತ್ತು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News