ಚಾಮರಾಜನಗರ | ಕುಸಿದುಬಿದ್ದು 3ನೇ ತರಗತಿಯ ವಿದ್ಯಾರ್ಥಿನಿ ಮೃತ್ಯು
Update: 2025-01-06 15:28 GMT
ಚಾಮರಾಜನಗರ: ಶಾಲಾ ಆವರಣದಲ್ಲಿ ಕುಸಿದುಬಿದ್ದು 3ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಚಾಮರಾಜನಗರ ದಲ್ಲಿ ಇಂದು ನಡೆದಿದೆ.
ಚಾಮರಾಜನಗರ ದ ಸೆಂಟ್ ಫ್ರಾನ್ಸಿಸ್ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ನಿ ತೇಜಸ್ವಿನಿ ಮೃತಪಟ್ಟ ಬಾಲಕಿ.
ತೇಜಸ್ವಿನಿ ಎಂದಿನಂತೆ ಸೋಮವಾರ ಬೆಳಗ್ಗೆ ಶಾಲೆಗೆ ಆಗಮಿಸಿದ್ದಳು. ಮಧ್ಯತರದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದಾಗ ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದಳೆನ್ನಲಾಗಿದೆ. ಇದನ್ನು ಗಮನಿಸಿದ ಶಾಲಾ ಸಿಬ್ಬಂದಿ ತಕ್ಷಣ ಬಾಲಕಿಯನ್ನು ಜೆಎಸ್ಎಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.