ಚಾಮರಾಜನಗರ : ಲಾರಿ- ಈಚರ್ ವಾಹನ ಢಿಕ್ಕಿ; ಓರ್ವ ಮೃತ್ಯು

Update: 2024-08-24 06:22 GMT

ಚಾಮರಾಜನಗರ : ಲಾರಿ ಮತ್ತು ಈಚರ್ ವಾಹನ ಮುಖಾಮುಖಿ ಢಿಕ್ಕಿಯಾಗಿದ್ದು, ಘಟನೆಯಲ್ಲಿ ಚಾಲಕನೊಬ್ಬ ಮೃತಪಟ್ಟ  ಘಟನೆ ಹನೂರು ತಾಲೂಕಿನ ನಾಲ್ ರೋಡ್ ಸಮೀದ ಬರಗೂರು ರಸ್ತೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಈಚರ್‌ ವಾಹನ ಚಾಲಕ ಹನೂರು ನಿವಾಸಿ ಶಿವು(27) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಟೊಮೊಟೊ ತುಂಬಿಕೊಂಡು ಹೋಗುತ್ತಿದ್ದಈಚರ್ ವಾಹನ  ಮಗುಚಿ  ಬಿದಿದ್ದು,  ಲಾರಿಯು ಸ್ವಲ್ಪ ದೂರಕ್ಕೆ ಉರುಳಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News