ಇದು ನನ್ನ ಕೊನೆಯ ಚುನಾವಣೆ ದಯವಿಟ್ಟು ಕೈ ಬಿಡಬೇಡಿ: ಎಸ್. ಬಾಲರಾಜು

Update: 2024-03-23 05:14 GMT

ಕೊಳ್ಳೇಗಾಲ, ಮಾ.22: ಇದು ನನ್ನ ಕೊನೆಯ ಚುನಾವಣೆ ದಯವಿಟ್ಟುನನ್ನ ಕೈ ಬಿಡಬೇಡಿ ನನಗೆ ಆಶೀರ್ವಾದ ಮಾಡಿ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಪಟ್ಟಣದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿತುಂಬಾ ಹೋರಾಟ ಇದೆ, ತುಂಬಾ ಜಂಜಾಟ ಇದೆ, ಪ್ರಾಮಾಣಿಕರಿಗೆ ಬೆಲೆ ಇಲ್ಲ.ಹೊರಗಿನಿಂದ ಬಂದವರಿಗೆ ಅವಕಾಶ ಸಿಗುತ್ತದೆ ಎಂದು ರಾಜಕೀಯ ನಿವೃತ್ತಿ ಪಡೆಯಲು ಉದ್ದೇಶಿಸಿದೆ. ಆದರೆ ಈ ಬಾರಿಮಲೆ ಮಾದೇಶ್ವರನ ಕೃಪೆ ಬಿಳಿಗಿರಂಗನಾಥನ ಆಶೀರ್ವಾದ ನನಗೆ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಕಳೆದ ಬಾರಿ ನಾನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿ ಟಿಕೆಟ್ ಬಯಸಿದ್ದೆ. ಆದರೆನನಗೆ ಪಕ್ಷ ಅವಕಾಶ ನೀಡಿರಲಿಲ್ಲ ಆದರೆ ಈ ಬಾರಿ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವಂಥ ಅವಕಾಶ ದೊರೆತಿದೆ.ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಾನು ಗೆದ್ದರೆ ಎಂಟು ಬಾರಿ ಗೆದ್ದಂತೆ ಆಗುತ್ತದೆಎಂದರು.

ಮೊನ್ನೆನಾನು ಯಡಿಯೂರಪ್ಪ ರವರ ಕಾಲಿಗೆ ಬಿದ್ದಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಟ್ ಮಾಡಿದ್ದರು. ಹೌದು ಬಿದ್ದಿದ್ದು ನಿಜ. ಅವರ ಕಾಲು ನನಗೆ ಪವಿತ್ರ. ನಾನು ಕಾಲಿಗೆ ಬಿದ್ದು ತಪ್ಪೇನು ಮಾಡಿಲ್ಲ. ನನಗೆ ತಂದೆ-ತಾಯಿಗಳು ಇಬ್ಬರೂ ಇಲ್ಲ. ನನಗೆತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ಮಾರ್ಗದರ್ಶನ ನೀಡಿ ಆಶೀರ್ವಾದ ಮಾಡುವ ನನ್ನ ಗುರುಗಳು ಅವರು. ನನ್ನ ತಂದೆ ಸಮಾನರಾದ ಅವರ ಕಾಲಿಗೆ ಬಿದ್ದಿರುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ಚುನಾವಣೆ ಉಸ್ತುವಾರಿ ಫಣೇಶ್, ಜನಧ್ವನಿ ವೆಂಕಟೇಶ್, ಜಿಲ್ಲಾ ಸಂಚಾಲಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ನಟರಾಜ್ ಗೌಡ್ರು, ದತ್ತೇಶ್ ಕುಮಾರ್, ಕಿಂಕಳ್ಳಿ ರಾಚಯ್ಯ ,ಅನಿಲ್, ನಾಗೇಶ್. ಶಿವಕುಮಾರ್ .ಜೈ ಸುಂದರ.ಇನ್ನು ಮುಂತಾದವರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News