ಮೂಡಿಗೆರೆ | ಭೀಮಾ ಕೋರೆಂಗಾವ್ ವಿಜಯೋತ್ಸವ: ಅಂಬೇಡ್ಕ‌ರ್ ಪುತ್ಥಳಿ ವಿಚಾರದಲ್ಲಿ ಉದ್ವಿಗ್ನ ವಾತಾವರಣ

Update: 2025-01-05 05:36 GMT

ಚಿಕ್ಕಮಗಳೂರು: ಪಟ್ಟಣದ ಲಯನ್ಸ್‌ ವೃತ್ತದಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವಕ್ಕಾಗಿ ತಂದಿದ್ದ ಅಂಬೇಡ್ಕ‌ರ್ ಪುತ್ಥಳಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಗೊಂದಲ ನಿರ್ಮಾಣವಾಗಿದ್ದು, ಉದ್ವಿಗ್ನ ಸ್ಥಿತಿ ಏರ್ಪಟ್ಟಿರುವ ಬಗ್ಗೆ ವರದಿಯಾಗಿದೆ. 

ಭೀಮಾ ಕೋರೆಂಗಾವ್ ವಿಜಯೋತ್ಸವಕ್ಕಾಗಿ ಬೆಂಗಳೂರಿನಿಂದ ಅಂಬೇಡ್ಕ‌ರ್ ಪುತ್ಥಳಿಯನ್ನು ತರಲಾಗಿತ್ತು. ಅದನ್ನು ಕಾರ್ಯಕ್ರಮದ ಬಲಭಾಗದಲ್ಲಿ ಇಟ್ಟು ಪುಷ್ಪಾರ್ಚನೆ ಮಾಡಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿದರೂ ಅದನ್ನು ತೆರವು ಮಾಡದೇ ಉಳಿಸಿದ್ದರಿಂದ ಪಟ್ಟಣ ಪಂಚಾಯಿತಿಯಿಂದ ತೆರವಿಗೆ ಸೂಚಿಸಲಾಗಿತ್ತು. ಈ ವೇಳೆ ಆಚರಣಾ ಸಮಿತಿಯ ಕೆಲವರು ತೆರವಿಗೆ ಒಪ್ಪಿಗೆ ಸೂಚಿಸಿದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ.

ಇದರಿಂದ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಗೊಂದಲವನ್ನು ತಿಳಿಗೊಳಿಸಿದ್ದು, ಆಚರಣಾ ಸಮಿತಿಯ ಪದಾಧಿಕಾರಿಗಳೇ ಪ್ರತಿಮೆಯನ್ನು ತೆರವು ಮಾಡಿ  ಪ್ರಕರಣದ ಗೊಂದಲಕ್ಕೆ ತೆರೆ ಎಳೆಯಲಾಯಿತು ಎಂದು ತಿಳಿದು ಬಂದಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಮೆ ಇಟ್ಟಿದ್ದ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News