ವಂಚನೆ ಆರೋಪ: ತುಳು ಸಿನೆಮಾ ನಿರ್ಮಾಪಕ ಅರುಣ್ ರೈ ವಿರುದ್ಧ ಬೆಂಗಳೂರಿನಲ್ಲಿ ಎಫ್‍ಐಆರ್ ದಾಖಲು
Update: 2024-12-01 17:06 GMT
ಬೆಂಗಳೂರು: “ಜೀಟಿಗೆ' ತುಳು ಸಿನಿಮಾದ ನಿರ್ಮಾಪಕ ಅರುಣ್ ರೈ ಸೇರಿದಂತೆ ಐವರ ವಿರುದ್ಧ ವಂಚನೆ ಆರೋಪದಡಿ ಇಲ್ಲಿನ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಬಂಟ್ವಾಳದ ಉದ್ಯಮಿ ವರದರಾಜ್.ಟಿ ಅವರಿಗೆ ಕೆಲ ದಿನಗಳ ಹಿಂದೆ ಅರುಣ್ ರೈ ಅವರ ಪರಿಚಯವಾಗಿದ್ದು, ಈ ವೇಳೆ ಕನ್ನಡದಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ವೀರಕಂಬಳ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದೆ. ಅದರ ಲಾಭಾಂಶ ಕೊಡುತ್ತೇನೆ ಎಂದು ನಂಬಿಸಿದ್ದರು. ಹೀಗೆ, ಹಂತ ಹಂತವಾಗಿ ಸುಮಾರು 9 ಕೋಟಿ ಹಣ ವಸೂಲಿ ಮಾಡಿದ್ದು, ನಕಲಿ ಕರಾರು ಪತ್ರಗಳನ್ನು ಸಹ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಅನ್ವಯ ನಿರ್ಮಾಪಕ ಅರುಣ್ ರೈ, ಆತನ ಸಹೋದರ ಅರ್ಜುನ್ ರೈ, ಶ್ರೀನಿವಾಸ್ ಕೆ.ಪಿ, ರಘು ಹಾಗೂ ಗೋವಿಂದಪ್ಪ ಎಂಬವರ ವಿರುದ್ಧ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.