ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ರಾಷ್ಟ್ರ ಪ್ರಶಸ್ತಿಯನ್ನು ಅಮಾನತುಗೊಳಿಸಿದ ಸರಕಾರ

Update: 2024-10-06 09:23 GMT

ಜಾನಿ ಮಾಸ್ಟರ್ (Photo:X)

ಹೊಸದಿಲ್ಲಿ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಅವರಿಗೆ ಘೋಷಿಸಲಾಗಿದ್ದ ರಾಷ್ಟ್ರಪ್ರಶಸ್ತಿಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಮಾನತುಗೊಳಿಸಿದೆ.

ಇದರೊಂದಿಗೆ, ಮಂಗಳವಾರ ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತ್ರಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆಯನ್ನೂ ಅವರಿಂದ ಹಿಂಪಡೆಯಲಾಗಿದೆ.

2022ರ ತಮಿಳುಚಿತ್ರ ‘ತಿರುಚಿತ್ರಂಬಲಂ’ನ “ಮೇಘಂ ಕರುಕ್ಕತ’ ಗೀತೆಗಾಗಿ ಜಾನಿ ಮಾಸ್ಟರ್ ಸಂಯೋಜಿಸಿದ್ದ ನೃತ್ಯಕ್ಕಾಗಿ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಬೇಕಿತ್ತು.

ಆದರೆ, ಶುಕ್ರವಾರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘಟಕ ಬಿಡುಗಡೆ ಮಾಡಿರುವ ಟಿಪ್ಪಣಿಯಲ್ಲಿ, ನಿಮ್ಮ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬರುವುದಕ್ಕೂ ಮುನ್ನ ನಿಮಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಆಹ್ವಾನ ಪತ್ರವನ್ನು ರವಾನಿಸಲಾಗಿತ್ತು ಎಂದು ಹೇಳಲಾಗಿದೆ.

“ಹೀಗಾಗಿ ಅಕ್ಟೋಬರ್ 8, 2024ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶೇಖ್ ಜಾನಿ ಬಾಷಾ (ಜಾನಿ ಮಾಸ್ಟರ್) ಅವರಿಗೆ ನೀಡಲಾಗಿದ್ದ ಆಮಂತ್ರಣ ಪತ್ರವನ್ನು ಹಿಂಪಡೆಯಲಾಗಿದೆ” ಎಂದು ಉಪ ನಿರ್ದೇಶಕಿ ಇಂದ್ರಾನಿ ಬೋಸ್ ಸಹಿ ಮಾಡಿರುವ ಟಿಪ್ಪಣಿಯಲ್ಲಿ ಹೇಳಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News