ಕಮಲ್ ಹಾಸನ್ ಅಭಿನಯದ ‘ಗುಣ’ ಮರುಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆ

Update: 2024-07-11 11:24 GMT

Photo: aha.video

ಚೆನ್ನೈ: ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪಗಳ ನಡುವೆ ಕಮಲ ಹಾಸನ್ ಅಭಿನಯದ 1991ರ ತಮಿಳು ಚಲನಚಿತ್ರ ‘ಗುಣ’ ಮರುಬಿಡುಗಡೆಗೆ ಮದ್ರಾಸ್ ಉಚ್ಚ ನ್ಯಾಯಾಲಯವು ತಡೆ ನೀಡಿದೆ.

ಘನಶ್ಯಾಮ ಹೇಮದೇವ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾ.ಪಿ.ವೇಲ್ಮುರುಗನ್ ಅವರು ತಾತ್ಕಾಲಿಕ ತಡೆಯಾಜ್ಞೆಯನ್ನು ಹೊರಡಿಸಿದರು. ಪ್ರತಿವಾದಿಗಳಾದ ಪಿರಾಮಿಡ್ ಆಡಿಯೊ ಇಂಡಿಯಾ ಪ್ರೈ.ಲಿ.,ಎವರ್‌ಗ್ರೀನ್ ಮೀಡಿಯಾ ಪ್ರೈ.ಲಿ. ಮತ್ತು ಪ್ರಸಾದ ಫಿಲ್ಮ್ ಲ್ಯಾಬೊರೇಟರೀಸ್‌ಗೆ ನೋಟಿಸ್‌ಗಳನ್ನೂ ನ್ಯಾಯಾಲಯವು ಹೊರಡಿಸಿತು.

ತಾನು ಚಲನಚಿತ್ರಗಳಿಗೆ ಹಣಕಾಸು ಪೂರೈಕೆ,ನಿರ್ಮಾಣ ಮತ್ತು ಹಕ್ಕುಸ್ವಾಮ್ಯ ಖರೀದಿಯ ವ್ಯವಹಾರವನ್ನು ನಡೆಸುತ್ತಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿರುವ ಹೇಮದೇವ,ಜಾಗತಿಕ ನೆಗೆಟಿವ್ ಹಕ್ಕುಸ್ವಾಮ್ಯವನ್ನು ಹೊಂದಿದ್ದ ಎನ್ ರತ್ನಂ ಅವರಿಂದ ‘ಗುಣ’ ಸೇರಿದಂತೆ 10 ತಮಿಳು ಚಿತ್ರಗಳ ಸಂಪೂರ್ಣ ನೆಗೆಟಿವ್ ಹಕ್ಕುಗಳನ್ನು ತಾನು ಖರೀದಿಸಿದ್ದೇನೆ ಎಂದು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News