ಅತ್ಯಾಚಾರ ಆರೋಪ: ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಬಂಧನ
ಹೈದರಾಬಾದ್: ತಮ್ಮ ಸಹಾಯಕ ನೃತ್ಯ ನಿರ್ದೇಶಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸೈಬರಾಬಾದ್ ಪೊಲೀಸರು ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅಲಿಯಾಸ್ ಶೇಕ್ ಜಾನಿ ಬಾಶಾರನ್ನು ಗುರುವಾರ ಬಂಧಿಸಿದ್ದಾರೆ.
ಜಾನಿ ಮಾಸ್ಟರ್ ಅವರನ್ನು ಗೋವಾದ ಹೋಟೆಲ್ ಒಂದರಿಂದ ಬಂಧಿಸಲಾಗಿದ್ದು, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ, ಟ್ರಾನ್ಸಿಟ್ ವಾರಂಟ್ ಗಾಗಿ ಸ್ಥಳೀಯ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಯಿತು.
“ನಿಯಮಗಳ ಪ್ರಕಾರ, ಅವರನ್ನು ಟ್ರಾನ್ಸಿಟ್ ವಾರಂಟ್ ಮೇಲೆ ಸೈಬರಾಬಾದ್ ಗೆ ಕರೆ ತರಲಾಗುತ್ತಿದ್ದು, ಅವರನ್ನು ಸಂಬಂಧಿತ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು” ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ಅವಿನಾಶ್ ಮೊಹಾಂತಿ ತಿಳಿಸಿದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮುನ್ನ, ತಮ್ಮ ಸಹಾಯಕ ನೃತ್ಯ ನಿರ್ದೇಶಕಿಯ ಮೇಲೆ ಅತ್ಯಾಚಾರವೆಸಗಿ, ಆಕೆಗೆ ಪ್ರಾಣ ಬೆದರಿಕೆ ಒಡ್ಡಿರುವ ಆರೋಪದ ಮೇಲೆ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.