ಸೀತೆಯ ಪಾತ್ರಕ್ಕಾಗಿ ಮಾಂಸಹಾರ ತ್ಯಜಿಸಿದ್ದಾರೆಂಬ ವರದಿ: ʼಆಧಾರರಹಿತʼ ಎಂದು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ನಟಿ ಸಾಯಿ ಪಲ್ಲವಿ

Update: 2024-12-12 12:13 GMT

ಸಾಯಿ ಪಲ್ಲವಿ (Photo: Instagram)

ಹೊಸದಿಲ್ಲಿ: ತನ್ನ ಬಗ್ಗೆ ಆಧಾರರಹಿತ ಸುದ್ದಿಗಳು ಅಥವಾ ವದಂತಿಗಳನ್ನು ಹರಡುವ ಜನರು ಮತ್ತು ಪೋರ್ಟಲ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಾಯಿ ಪಲ್ಲವಿ ಎಚ್ಚರಿಕೆ ನೀಡಿದ್ದಾರೆ.

ರಾಮಾಯಣ ಭಾಗ-1ರಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ಮಾಡುವುದರಿಂದ ನಿರ್ದಿಷ್ಟವಾಗಿ ಸಸ್ಯಾಹಾರಿ ಆಹಾರವನ್ನು ಅಳವಡಿಸಿಕೊಂಡಿದ್ದಾರೆ. ಅವರು ಸೀತಾ ದೇವಿಯ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಮಾಂಸಾಹಾರ ತ್ಯಜಿಸಿದ್ದಾರೆ. ತನ್ನ ಪ್ರವಾಸದ ಸಮಯದಲ್ಲಿ ಸಾಯಿ ಪಲ್ಲವಿ ಸಸ್ಯಹಾರ ಅಡುಗೆ ಮಾಡುವ ತಂಡದೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ತಮಿಳು ದಿನಪತ್ರಿಕೆಯೊಂದು ವರದಿ ಮಾಡಿತ್ತು.

ಈ ಕುರಿತ ಮಾಧ್ಯಮ ವರದಿ ಬಗ್ಗೆ ಪ್ರತಿಕ್ರಿಯಿಸಿದ ಸಾಯಿ ಪಲ್ಲವಿ, ಹೆಚ್ಚಿನ ಸಂದರ್ಭಗಳಲ್ಲಿ ಆಧಾರರಹಿತ ವದಂತಿಗಳು ಮತ್ತು ಸುಳ್ಳುಗಳನ್ನು ಹರಡಿದಾಗ ನಾನು ಮೌನವಾಗಿರಲು ಪ್ರಯತ್ನಿಸುತ್ತೇನೆ. ಆದರೆ ಅದು ಸ್ಥಿರವಾಗಿ ನಡೆಯುತ್ತಿರುತ್ತದೆ ಮತ್ತು ನಿಲ್ಲುವಂತೆ ತೋರುತ್ತಿಲ್ಲ ಎಂದಾಗ ನನಗೆ ಪ್ರತಿಕ್ರಿಯಿಸುವ ಸಮಯ ಬಂದಿದೆ. ಮುಂದಿನ ಬಾರಿ ಯಾವುದೇ ಮಾಧ್ಯಮಗಳು ಸುದ್ದಿ ಅಥವಾ ಗಾಸಿಪ್ ಗಳ ಹೆಸರಿನಲ್ಲಿ ಕಟ್ಟು ಕಥೆಯನ್ನು ಪ್ರಚಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾಯಿ ಪಲ್ಲವಿ ಎಚ್ಚರಿಕೆಯನ್ನು ನೀಡಿದ್ದಾರೆ.

ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿಯವರ ರಾಮಾಯಣ ಭಾಗ-1 2026ರ ದೀಪಾವಳಿ ವೇಳೆ ಬಿಡುಗಡೆಯಾಗಲಿದೆ. ಎರಡನೇ ಭಾಗವು 2027ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ರಾಮನಾಗಿ, ಸಾಯಿ ಪಲ್ಲವಿ ಸೀತಾ ದೇವಿಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ನಮಿತ್ ಮಲ್ಹೋತ್ರಾ ಅವರ ನಿರ್ಮಾಪಣದಲ್ಲಿ ಚಿತ್ರವು ತೆರೆ ಕಾಣಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News