ಎರಡನೇ ದಿನವೇ 400 ಕೋಟಿ ಸಂಗ್ರಹದ ಗಡಿ ದಾಟಿದ ಪುಷ್ಪ-2
ಮುಂಬೈ: ಹಲವು ಯಶಸ್ವಿ ಚಿತ್ರಗಳನ್ನು ಕಂಡ 2024 ಕೊನೆಯ ಹಂತದಲ್ಲಿರುವಂತೆಯೇ ಹೊಸ ಚಾಂಪಿಯನ್ ಉದಯವನ್ನು ಬಾಲಿವುಡ್ ಎದುರು ನೋಡುತ್ತಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ತಾರಾಗಣದಲ್ಲಿರುವ ಪುಷ್ಪ-2 ಹೊಸ ದಾಖಲೆಯತ್ತ ದಾಪುಗಾಲು ಇಡುತ್ತಿದೆ. ಮೊದಲ ದಿನ ಭಾರತೀಯ ಭಾಷೆಗಳಲ್ಲಿ 174.9 ಕೋಟಿ ರೂಪಾಯಿ ಸಂಗ್ರಹದ ದಾಖಲೆ ನಿರ್ಮಿಸಿರುವ ಪುಷ್ಪ-2, ಎರಡನೇ ದಿನ ಭಾರತದಲ್ಲೇ 90.10 ಕೋಟಿ ರೂಪಾಯಗಳನ್ನು ಗಳಿಸಿದೆ ಎಂದು ಸ್ಕ್ಯಾನ್ ಲಿಕ್ ವರದಿ ಹೇಳಿದೆ.
ಎರಡು ದಿನಗಳ ಒಳಗೆ ಭಾರತದಲ್ಲೇ ಈ ಚಿತ್ರ 265 ಕೋಟಿ ರೂಪಾಯಿ ನಿವ್ವಳ ಆದಾಯ ಗಳಿಸಿದೆ. ವಿಶ್ವಾದ್ಯಂತ ಪುಷ್ಪ-2 ಗಳಿಕೆ 400 ಕೋಟಿ ರೂಪಾಯಿ ದಾಟಿದೆ. ಇದು ಅವರ ಅಭಿಮಾನಿ ವರ್ಗದ ನೆಲೆಗೆ ಸಾಕ್ಷಿ ಎಂದು ವರದಿ ವಿವರಿಸಿದೆ.
ಭಾರತದಾದ್ಯಂತ ಈ ಚಿತ್ರ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಪ್ರತಿ ಭಾಷೆಯಲ್ಲೂ ಎರಡನೇ ದಿನ ಕೂಡಾ ಉತ್ತಮ ಪ್ರೇಕ್ಷಕ ವರ್ಗವನ್ನು ಹೊಂದಿತ್ತು. ತೆಲುಗು ಭಾಷೆಯಲ್ಲಿ ಒಟ್ಟಾರೆ ಶೇಕಡ 53ರಷ್ಟು ಆಸನಗಳು ಭರ್ತಿಯಾಗಿದ್ದರೆ, ಹಿಂದಿಯಲ್ಲಿ ಶೇಕಡ 51.56ರಷ್ಟು, ತಮಿಳಿನಲ್ಲಿ ಶೇಕಡ 38.52, ಕನ್ನಡದಲ್ಲಿ 35.97, ಮಲಯಾಳಂನಲ್ಲಿ 27.3ರಷ್ಟು ಭರ್ತಿಯಾಗಿದ್ದವು. ಹಿಂದಿಯಲ್ಲಿ ಎರಡನೇ ದಿನ 49.5 ರಷ್ಟು ಆಸನಗಳು ಭರ್ತಿಯಾಗಿದ್ದರೆ, 3ಡಿಯಲ್ಲಿ ಇದು ಶೇಕಡ 100ರಷ್ಟಾಗಿತ್ತು.
ಇದೇ ವೇಗದಲ್ಲಿ ಚಿತ್ರ ಮುನ್ನಡೆದರೆ, ಎಲ್ಲ ದಾಖಲೆಗಳನ್ನು ವಾರಾಂತ್ಯಕ್ಕೆ ಪುಡಿ ಮಾಡುವ ಸಾಧ್ಯತೆಗಳಿವೆ. "ಪುಷ್ಪ-2: ದ ರೂಲ್ ಚಿತ್ರದಲ್ಲಿ ಅಲ್ಲು ಅರ್ಜುನ್ ಪುಷ್ಪರಾಜ್ ಕಥೆಯನ್ನು ಮುಂದುವರಿಸಿದ್ದಾರೆ. ಈತ ರಕ್ತಚಂದನದ ಕಳ್ಳಸಾಗಾಣಿಕೆದಾರನಾಗಿದ್ದು, ಶೂನ್ಯದಿಂದ ಬಂದು ಉದ್ಯಮದ ರಾಜನಾಗಿ ಮೆರೆಯುತ್ತಾರೆ. ಸುಕುಮಾರ್ ನಿರ್ದೇಶನದ ಚಿತ್ರವು ಪುಷ್ಪ ಎದುರಿಸುವ ಸವಾಲುಗಳನ್ನು ವಿವರಿಸುತ್ತಾ ಸಾಗಿದೆ.