ನಟನೆಗೆ ವಿರಾಮ ಘೋಷಿಸಿದ ʼ12th ಫೇಲ್ʼ ನಟ ವಿಕ್ರಾಂತ್ ಮ್ಯಾಸ್ಸಿ

Update: 2024-12-02 05:44 GMT

ವಿಕ್ರಾಂತ್ ಮ್ಯಾಸ್ಸಿ (Photo: PTI)

ಹೊಸದಿಲ್ಲಿ: ಬಾಲಿವುಡ್ ನಟ ವಿಕ್ರಾಂತ್ ಮ್ಯಾಸ್ಸಿ ನಟನೆಗೆ ತಾತ್ಕಾಲಿಕ ವಿರಾಮ ಘೋಷಿಸಿದ್ದಾರೆ.

ನಟ ವಿಕ್ರಾಂತ್ ಮ್ಯಾಸಿ ಅವರ ʼದಿ ಸಬರಮತಿ ಎಕ್ಸ್ ಪ್ರೆಸ್ʼ ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. 12th Fail, ಸೆಕ್ಟರ್ 36(Sector 36) ನಲ್ಲೂ ನಿರೀಕ್ಷಿತ ಫಲಿತಾಂಶ ಅವರು ಗಳಿಸಿರಲಿಲ್ಲ. ಇದರ ಬೆನ್ನಲ್ಲೇ ಅವರು ನಟನೆಗೆ ವಿರಾಮ ಘೋಷಿಸಿದ್ದಾರೆ.

ವಿಕ್ರಾಂತ್ ಮ್ಯಾಸಿ ನಟಿಸಿರುವ ʼದಿ ಸಬರಮತಿ ಎಕ್ಸ್ ಪ್ರೆಸ್ʼ ಚಲನ ಚಿತ್ರಕ್ಕೆ ಹಲವು ರಾಜ್ಯಗಳು ತೆರಿಗೆ ವಿನಾಯಿತಿ ಘೋಷಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಚಿತ್ರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು, ಆದರೆ ಚಿತ್ರವು ಹಿಟ್ ಆಗುವಲ್ಲಿ ವಿಫಲವಾಗಿತ್ತು.

ವಿಕ್ರಾಂತ್ ಪ್ರಸ್ತುತ ʼಯಾರ್ ಜಿಗ್ರಿʼ ಮತ್ತು ʼಆಂಖೋನ್ ಕಿ ಗುಸ್ತಾಖಿಯಾನ್ʼ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಈ ಕುರಿತು Instagramನಲ್ಲಿನ ಪೋಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡ ನಟ ವಿಕ್ರಾಂತ್ ಮ್ಯಾಸಿ, ಕಳೆದ ಕೆಲವು ವರ್ಷಗಳು ಮತ್ತು ಅದರಾಚೆಗೆ ಅದ್ಭುತವಾಗಿದ್ದವು. ಎಂದೂ ಅಳಿಸಲಾಗದ ನಿಮ್ಮ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆದರೆ ನಾನು ಮುಂದಕ್ಕೆ ಹೋದಂತೆ ಇದು ಮನೆಗೆ ಹಿಂತಿರುಗುವ ಸಮಯ ಎಂದು ನಾನು ಅರಿತುಕೊಂಡೆ. ಪತಿಯಾಗಿ, ತಂದೆ ಮತ್ತು ಮಗನಾಗಿ ಮತ್ತು ನಟನಾಗಿ ಕೂಡ ಎಂದು ವಿಕ್ರಾಂತ್ ಪೋಸ್ಟ್ನಲ್ಲಿ ಬರೆದಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News