"ರಾಜಕಾರಣವನ್ನು ಪ್ರಶ್ನಿಸಬೇಕು": ರಾಮ ಮಂದಿರ ಉದ್ಘಾಟನೆಯಲ್ಲಿ ರಜಿನಿಕಾಂತ್‌ ಭಾಗಿ ಬಗ್ಗೆ ಖ್ಯಾತ ನಿರ್ದೇಶಕ ಪಾ ರಂಜಿತ್‌ ಹೇಳಿದ್ದೇನು?

Update: 2024-01-24 13:25 GMT

ನಟ ರಜಿನಿಕಾಂತ್‌ ಜೊತೆ ಪಾ ರಂಜಿತ್‌ (Photo: indiatoday.in)

ಚೆನ್ನೈ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯು “ಪ್ರತಿಗಾಮಿ ರಾಜಕೀಯದ” ಅಭಿವ್ಯಕ್ತಿಯಾಗಿದೆ ಎಂದು ಬಣ್ಣಿಸಿರುವ ಖ್ಯಾತ ನಿರ್ದೇಶಕ ಪಾ ರಂಜಿತ್‌, ದೇಶದ ಭವಿಷ್ಯ ಅಪಾಯದಲ್ಲಿದೆ ಎಂದಿದ್ದಾರೆ.

ಈ ಸಮಾರಂಭದಲ್ಲಿ ಖ್ಯಾತ ನಟ ರಜಿನಿಕಾಂತ್‌ ಭಾಗವಹಿಸುವಿಕೆ ಕುರಿತು ಪ್ರತಿಕ್ರಿಯಿಸಿದ ರಂಜಿತ್‌, “ಅದು ಅವರ ವೈಯಕ್ತಿಕ ಆಯ್ಕೆಯಾಗಿದೆ. ದೇವಸ್ಥಾನದ ಉದ್ಘಾಟನೆಯೊಂದಿಗೆ 500 ವರ್ಷ ಹಳೆಯ ಸಮಸ್ಯೆ ಪರಿಹಾರಗೊಂಡಿದೆ ಎನ್ನಲಾಗಿದೆ. ಆದರೆ ನಾವು ಆ ಸಮಸ್ಯೆಯ ಹಿಂದಿನ ರಾಜಕೀಯವನ್ನು ಪ್ರಶ್ನಿಸಬೇಕಿದೆ. ಸರಳವಾದ ಸರಿ ಅಥವಾ ತಪ್ಪಿನಾಚೆಗೆ ನನಗೆ ಈ ವಿಚಾರದ ಕುರಿತು ಅಭಿಪ್ರಾಯಗಳಿವೆ,” ಎಂದು ತಮ್ಮ ಮುಂಬರುವ ಸಿನೆಮಾ “ಬ್ಲೂ ಸ್ಟಾರ್”‌ ಕುರಿತಂತೆ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

“ನಾವು ನಮ್ಮ ಮನೆಗಳಲ್ಲಿ ಕರ್ಪೂರದ ಆರತಿ ಬೆಳಗಿಸದೇ ಇದ್ದರೆ ನಮ್ಮನ್ನು ಉಗ್ರವಾದಿಗಳೆಂದು ಪರಿಗಣಿಸುವ ಹಂತದಲ್ಲಿ ನಾವಿದ್ದೇವೆ. ದೇಶ ಅಪಾಯಕಾರಿ ಭವಿಷ್ಯದತ್ತ ಮುನ್ನಡೆಯುತ್ತಿದೆ. ಮುಂದಿನ ಐದರಿಂದ ಹತ್ತು ವರ್ಷಗಳ ಕಾಲ ನಾವು ಯಾವ ರೀತಿಯ ಭಾರತದಲ್ಲಿ ವಾಸಿಸಬೇಕೆಂದು ಭಯವಾಗುತ್ತಿದೆ,” ಎಂದು ಅವರು ಹೇಳಿದರು.

ರಂಜಿತ್‌ ಅವರು ರಜಿನಿಕಾಂತ್‌ ಅವರ ನಟನೆಯ ಕಬಾಲಿ ಮತ್ತು ಕಾಲಾ ನಿರ್ದೇಶಕರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News