ಆಸ್ಕರ್ ಹಾದಿಯಲ್ಲಿ 'ಸನ್ ಫ್ಲವರ್ಸ್…' ಲೈವ್ ಆ್ಯಕ್ಷನ್ ಕಿರುಚಿತ್ರ
ಹೊಸದಿಲಿ: ದ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ಟಿಐಐ) ತನ್ನ ವಿದ್ಯಾರ್ಥಿಗಳಿಂದ ನಿರ್ಮಿಸಿರುವ ''ಸನ್ ಫ್ಲವರ್ಸ್ ವರ್ ದ ಫಸ್ಟ್ ವನ್ಸ್ ಟೂ ನೋ' ಕಿರುಚಿತ್ರ ಮಹತ್ವದ ಮೈಲುಗಲ್ಲು ತಲುಪಲು ಸಜ್ಜಾಗಿದೆ. ಚಿದಾನಂದ ಎಸ್ ನಾಯ್ಕ ನಿರ್ದೇಶನದ ಚಿತ್ರ, ಲೈವ್ ಆ್ಯಕ್ಷನ್ ಕಿರುಚಿತ್ರ ವಿಭಾಗದಲ್ಲಿ 2025ರ ಆಸ್ಕರ್ ಪ್ರಶಸ್ತಿಗೆ ಅರ್ಹತೆ ಪಡೆದಿದೆ.
ಈಗಾಗಲೇ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿರುವ ಚಿತ್ರ, ಕೆನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರತಿಷ್ಠಿತ ಲಾ ಸಿನೆಫ್ ಸೆಲೆಕ್ಷನ್ ನಲ್ಲಿ ಮೊದಲ ಬಹುಮಾನ ಪಡೆದಿದೆ. ಈ ಮೂಲಕ ಅಂತರಾಷ್ಟ್ರೀಯ ಗಮನವನ್ನು ಸೆಳೆದಿತ್ತು.
ಮೂಲತಃ ಕನ್ನಡದಲ್ಲಿ ನಿರ್ಮಿಸಿರುವ, 'ಸನ್ಫ್ಲವರ್ಸ್ ವರ್ ದ ಫಸ್ಟ್ ವನ್ಸ್ ಟೂ ನೋ' ಚಿತ್ರ ಭಾರತೀಯ ಜಾನಪದ ಕಥೆಗಳು ಮತ್ತು ಸಂಪ್ರದಾಯಗಳಿಂದ ಸ್ಫೂರ್ತಿ ಪಡೆದಿದೆ. ವೃದ್ಧ ಮಹಿಳೆಯೊಬ್ಬರು ಹುಂಜ ಕೋಳಿಯನ್ನು ಕದಿಯುವ ಮೂಲಕ ತನ್ನ ಗ್ರಾಮದಲ್ಲಿ ಬೆಳಗಾಗುವುದನ್ನು ವ್ಯತ್ಯಯ ಮಾಡುತ್ತಾಳೆ. ಆ ಮೂಲಕ ಇಡೀ ಸಮುದಾಯದಲ್ಲಿ ಅರಾಜಕತೆ ಮೂಡುತ್ತದೆ. ಸಮತೋಲನವನ್ನು ಮರುಸ್ಥಾಪನೆ ಮಾಡುವ ನಿಟ್ಟಿನಲ್ಲಿ ಭವಿಷ್ಯ ಕೇಳಲಾಗುತ್ತದೆ. ಇದರ ಅನ್ವಯ ಹುಂಜವನ್ನು ಹಿಂದಕ್ಕೆ ಪಡೆಯುವ ಯಾತ್ರೆ ಕೈಗೊಳ್ಳುವ ಸಲುವಾಗಿ ಮಹಿಳೆಯ ಕುಟುಂಬವನ್ನು ಗಡೀಪಾರು ಮಾಡಲಾಗುತ್ತದೆ. ಇದು ಚಿತ್ರದ ಕಥಾನಕ.
ನಾಯಕ್ ಅವರು ಎಫ್ ಟಿಟಿಐ ನುರಿತ ತಂಡದೊಂದಿಗೆ ಈ ಪರಿಕಲ್ಪನೆಗೆ ಜೀವ ತುಂಬಿದ್ದಾರೆ.