ಸಿನಿಮಾ ರೂಪದಲ್ಲಿ ತೆರೆಗೆ ಬರಲಿರುವ ‘ಮಿರ್ಝಾಪುರ್'
ಹೊಸದಿಲ್ಲಿ : ಅಮೆಝಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಮಿರ್ಝಾಪುರ್-3’ ವೆಬ್ ಸರಣಿ, ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಈ ಸಿನಿಮಾ ಮೂಲಕ ಪಂಕಜ್ ತ್ರಿಪಾಠಿ ಹಾಗೂ ಅಲಿ ಫಝಲ್ ಮತ್ತೆ ಒಗ್ಗೂಡಿದ್ದಾರೆ. ಈ ಸರಣಿಯಲ್ಲಿ ಮುನ್ನಾ ತ್ರಿಪಾಠಿ ಪಾತ್ರ ನಿರ್ವಹಿಸಿದ್ದ ದಿವ್ಯೇಂದು ಕೂಡಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೂರು ಭಾಗವಾಗಿ ಪ್ರಸಾರಗೊಂಡಿದ್ದ ‘ಮಿರ್ಝಾಪುರ್’ ವೆಬ್ ಸರಣಿಯ ಎರಡನೆ ಭಾಗದಲ್ಲಿ ದಿವ್ಯೇಂದು ನಿರ್ವಹಿಸಿದ್ದ ಮುನ್ನಾ ತ್ರಿಪಾಠಿ ಪಾತ್ರ ಹತ್ಯೆಗೀಡಾಗಿತ್ತು.
ಈ ಸಿನಿಮಾಗೆ ಪುನೀತ್ ಕೃಷ್ಣ ಕತೆ ರಚಿಸಿದ್ದು, ಗುರ್ಮೀತ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಎಕ್ಸೆಲ್ ಎಂಟರ್ ಟೈನ್ ಮೆಂಟ್ ನ ರಿತೇಶ್ ಸಿಧ್ವಾನಿ ಹಾಗೂ ಫರ್ಹಾನ್ ಅಖ್ತರ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ 2026ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಎಂಟು ವಾರಗಳ ನಂತರ, ಭಾರತದಲ್ಲಿನ ಅಮೆಝಾನ್ ಪ್ರೈಮ್ ಚಂದಾದಾರರಿಗೆ ಹಾಗೂ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
2018ರಲ್ಲಿ ಬಿಡುಗಡೆಯಾಗಿದ್ದ ಈ ಕ್ರೈಮ್ ಥ್ರಿ ಲ್ಲರ್ ವೆಬ್ ಸರಣಿಯ ಮೊದಲ ಭಾಗ ನವೆಂಬರ್ 2018ರಲ್ಲಿ ಬಿಡುಗಡೆಯಾಗಿತ್ತು. ನಂತರ, ಎರಡನೆಯ ಭಾಗ ಅಕ್ಟೋಬರ್ 2020ರಲ್ಲಿ ಬಿಡುಗಡೆಯಾಗಿತ್ತು. ಮೂರನೆಯ ಭಾಗವು ಜುಲೈ 2024ರಲ್ಲಿ ಬಿಡುಗಡೆಯಾಗಿತ್ತು.
ಈ ವೆಬ್ ಸರಣಿಯು ಅಪಾರ ಪ್ರಮಾಣದ ವೀಕ್ಷಕರನ್ನು ತನ್ನನ್ನ ಸೆಳೆದು, ಜನಪ್ರಿಯ ವೆಬ್ ಸರಣಿಗಳ ಪೈಕಿ ಒಂದಾಗಿತ್ತು. ಈ ವೆಬ್ ಸರಣಿಯನ್ನು ಎಕ್ಸೆಲ್ ಎಂಟರ್ ಟೈನ್ ಮೆಂಟ್ ನಿರ್ಮಿಸಿತ್ತು.