ಭಾರತ ಮತ್ತು ಪಾಕಿಸ್ತಾನದ ನಡುವಿನ ವೈರತ್ವಕ್ಕೆ 'ರಾಜಕೀಯ ಆಟ' ಕಾರಣ: ಬಿಜೆಪಿ ಸಂಸದ ಸನ್ನಿ ಡಿಯೋಲ್‌

Update: 2023-07-27 13:46 GMT

ಸನ್ನಿ ಡಿಯೋಲ್‌ (Photo credit: Twitter/@iamsunnydeol)

ಮುಂಬೈ: ಭಾರತ ಮತ್ತು ಪಾಕಿಸ್ತಾನದ ನಡುವಿನ ವೈರತ್ವಕ್ಕೆ “ರಾಜಕೀಯ ಆಟ” ಕಾರಣ ಎಂದು ನಟ-ರಾಜಕಾರಣಿ ಸನ್ನಿ ಡಿಯೋಲ್‌ ಹೇಳಿದ್ದಾರೆ. ಎರಡೂ ದೇಶಗಳ ಜನರು ಪರಸ್ಪರರಿಗೆ ʼಸಮಾನ ಪ್ರೀತಿ” ಹೊಂದಿದ್ದಾರೆ ಎಂದು ಬುಧವಾರ ತಮ್ಮ ಮುಂಬರುವ ಚಲನಚಿತ್ರ ʼಗದರ್‌ 2” ಇದರ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು. ಎರಡೂ ದೇಶಗಳ ಜನರಿಗೆ ಪ್ರರಸ್ಪರರ ವಿರುದ್ಧ ಕಾದಾಡುವ ಮನಸ್ಸಿಲ್ಲ ಎಂದು ಅವರು ಹೇಳಿದರು.

“ಏನನ್ನು ನೀಡುವುದು ಮತ್ತು ಏನನ್ನು ಪಡೆದುಕೊಳ್ಳುವುದು ಎಂಬುದರ ಮೇಲೆ ಎಲ್ಲಾ ಅವಲಂಬಿತವಾಗಿದೆ. ಇದು ಮಾನವೀಯತೆಯ ವಿಚಾರ. ಯಾವುದೇ ಕಾದಾಟ ಇರಬಾರದು, ಎರಡೂ ಕಡೆಗಳಲ್ಲಿ ಸಮಾನ ಪ್ರೀತಿ ಇದೆ. ರಾಜಕೀಯ ಆಟದಿಂದ ದ್ವೇಷ ಹುಟ್ಟಿಕೊಳ್ಳುತ್ತದೆ, ಇದನ್ನು ಈ ಚಲನಚಿತ್ರದಲ್ಲಿ ನೋಡಬಹುದು. ನಾವೆಲ್ಲರೂ ಒಂದೇ ಭೂಮಿಯವರು,” ಎಂದು ಗುರುದಾಸ್ಪುರದ ಬಿಜೆಪಿ ಸಂಸದರಾಗಿರುವ ಡಿಯೋಲ್‌ ಹೇಳಿದರು.

2001ರಲ್ಲಿ ಬಿಡುಗಡೆಗೊಂಡ “ಗದರ್‌: ಏಕ್‌ ಪ್ರೇಮ್‌ ಕಥಾ” ಇದರ ಮುಂದುವರಿದ ಭಾಗವಾಗಿ “ಗದರ್ 2” ಸಿದ್ಧವಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News