‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನೆಮಾ ಬಿಡುಗಡೆಗೆ ತಡೆ ನೀಡಲು ಕೋರ್ಟ್ ನಕಾರ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಮತ್ತು ಟ್ರೇಲರ್‌ನಲ್ಲಿ ಅನಧಿಕೃತವಾಗಿ ಬಳಸಲಾಗಿರುವ ತಮಗೆ ಸಂಬಂಧಿಸಿದ ವಿಡಿಯೊ ತುಣಕನ್ನು ತೆಗೆದುಹಾಕುವಂತೆ ಕೋರಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು, ಜು.20: ಬಿಡುಗಡೆಗೆ ಸಿದ್ಧವಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಮತ್ತು ಟ್ರೇಲರ್‌ನಲ್ಲಿ ಅನಧಿಕೃತವಾಗಿ ಬಳಸಲಾಗಿರುವ ತಮಗೆ ಸಂಬಂಧಿಸಿದ ವಿಡಿಯೊ ತುಣಕನ್ನು ತೆಗೆದುಹಾಕುವಂತೆ ಕೋರಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಸಿನೆಮಾ ಬಿಡುಗಡೆಗೆ ತಡೆ ನೀಡಲು ಗುರುವಾರ ಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ 83ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ(ವಾಣಿಜ್ಯ ನ್ಯಾಯಾಲಯ) ನ್ಯಾಯಾಲಯವು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ 50 ಲಕ್ಷ ಡೆಪಾಸಿಟ್ ಇಡುವಂತೆ ಸೂಚಿಸಿದ್ದು, ಒಂದೊಮ್ಮೆ ಒಂದು ವಾರದ ಒಳಗಾಗಿ ಡೆಪಾಸಿಟ್ ಮಾಡದಿದ್ದಲ್ಲಿ, ತಡೆಯಾಜ್ಞೆ ತೆರವು ಆದೇಶವನ್ನು ಹಿಂಪಡೆಯುವುದಾಗಿ ಹೇಳಿದೆ.
ನ್ಯಾಯಾಲಯವು, ಪ್ರಸ್ತುತ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಬಿಡುಗಡೆ ಮಾಡಲು ಹಾಗೂ ರಮ್ಯಾರ ದೃಶ್ಯಗಳನ್ನು ಉಳಿಸಿಕೊಳ್ಳುವಂತೆ ಸೂಚಿಸಿದೆ. ಆದರೆ, ಪ್ರಕರಣ ಇನ್ನೂ ಅಂತ್ಯವಾಗಿಲ್ಲ. ಜು.27ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ. ಒಂದೊಮ್ಮೆ ಪ್ರಕರಣ ರಮ್ಯಾ ಪರವಾದರೆ ಚಿತ್ರತಂಡ ರಮ್ಯಾರಿಗೆ 1 ಕೋಟಿ ಹಣ ನೀಡಬೇಕಾಗುತ್ತದೆ.