ಪುತ್ತೂರು: ಅಕ್ರಮ ಮರ ಸಾಗಾಟ ಆರೋಪ; 4 ಮಂದಿ ಬಂಧನ

Update: 2024-10-07 16:22 GMT

ಪುತ್ತೂರು; ಪುತ್ತೂರು ಅರಣ್ಯ ವಿಭಾಗ ವ್ಯಾಪ್ತಿಯ ಕಲೆಂಜಿಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ದೂಪದ ಮರದಿಂದ ಸಂಗ್ರಹಿಸಲಾದ ಹಾಲುಮಡ್ಡಿ ಶೇಖರಿಸಿ ಸಾಗಾಟ ಮಾಡುತ್ತಿದ್ದ 4 ಮಂದಿಯನ್ನು ಸೋಮವಾರ ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಸಾಗಾಟ ನಡೆಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಬಾಯಬೆ ನಿವಾಸಿ ಉಮ್ಮರ್ ಫಾರೂಕ್ (44), ಪಾಟ್ರಕೋಡಿ ನಿವಾಸಿಗಳಾದ ಆಲಿ ಹೈದರ್ ಎಂ.ಕೆ(24), ಹಸೈನಾರ್(30) ಮತ್ತು ತಾಳಿಪಡ್ಪು ನಿವಾಸಿ ಉಮ್ಮರ್ ಫಾರೂಕ್(26) ಬಂಧಿತ ಆರೋಪಿಗಳು.

ಆರೋಪಿಗಳಿಂದ ಹಾಲುಮಡ್ಡಿ ಅಕ್ರಮ ಸಾಗಾಟಕ್ಕೆ ಬಳಕೆ ಮಾಡಿದ್ದ ಅಟೋ ರಿಕ್ಷಾ ಸೇರಿದಂತೆ ರೂ.11 ಸಾವಿರ ಮೌಲ್ಯದ ಅಲೂಮಡ್ಡಿ ಸಹಿತ ಒಟ್ಟು ರೂ.1.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ. ನೇತೃತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ವೀರಣ್ಣ, ಪ್ರಕಾಶ್, ಗೌರೀಶ್, ದಸ್ತು ಅರಣ್ಯ ಪಾಲಕರಾದ ಸತೀಶ್, ಚಾಲಕರಾದ ರಾಜೇಶ್, ತೇಜ ಪ್ರಸಾದ್ ಹಾಗೂ ಸಿಬಂದಿ ವಿನೋದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News