ಜ.17ರಿಂದ ಪೊಯ್ಯತ್ತಬೈಲ್ ಉರೂಸ್
ಉಳ್ಳಾಲ: ಪ್ರತೀ ಎರಡು ವರ್ಷಗಳಿಗೊಮ್ಮೆ ಆಚರಿಸಿ ಕೊಂಡು ಬರುವ ಪೊಯ್ಯತ್ತಬೈಲು ಅಸ್ಸಯ್ಯಿದತ್ ಮಣವಾಠಿ ಬೀವಿ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಜ.17ರಿಂದ ಫೆ. 2ರ ತನಕ ನಡೆಯಲಿದೆ ಎಂದು ಪೊಯ್ಯತ್ತಬೈಲು ಜಮಾಅತ್ ಮತ್ತು ಊರುಸ್ ಕಮಿಟಿ ಅಧ್ಯಕ್ಷ ಡಿ.ಎಂ.ಕೆ.ಮುಹಮ್ಮದ್ ತಿಳಿಸಿದ್ದಾರೆ.
ಅವರು ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಜ.17ರಂದು ಉರೂಸ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಜಮಾಅತ್ ಮತ್ತು ಊರೂಸ್ ಕಮಿಟಿ ಅಧ್ಯಕ್ಷ ಡಿ.ಎಂ.ಕೆ ಮುಹಮ್ಮದ್ ವಹಿಸಲಿದ್ದಾರೆ .
ಧಾರ್ಮಿಕ ಉಪನ್ಯಾಸ ದ ಉದ್ಘಾಟನಾ ಸಮಾರಂಭವು ಜ.17ರಂದು ರಾತ್ರಿ 8.30 ಗಂಟೆಗೆ ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ಮಳ್ ಹರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಲ್ ಹಾಜ್ ಅಸ್ಪಯ್ಯದ್ ಕೆ.ಎಸ್ ಆಟಕೋಯ ತಂಞಳ್ ಕುಂಬೋಲ್ ಉದ್ಘಾಟಿಸಲಿದ್ದಾರೆ .ಮುಖ್ಯ ಅತಿಥಿಯಾಗಿ ಅಖಿಲ ಭಾರತ ಸುನ್ನೀ ಜಂಹಿಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಹಾಗೂ ಪೊಯ್ಯತ್ತಬೈಲ್ ಖಾಜಿ ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಭಾಗವಹಿಸಲಿದ್ದಾರೆ .
ಮಹಲ್ ಸಂಗಮವು ಜ.19ರಂದು ಆದಿತ್ಯವಾರ ರಾತ್ರಿ 4.00 ಗಂಟೆಗೆ ಸುತ್ತು ಮುತ್ತಲು ಪರಿಸರದಲ್ಲಿರುವ ಜಮಾ- ಅತಿನ ಸಂಗಮ ನಡೆಯಲಿದೆ.
ಜ.21ರಂದು ರಾತ್ರಿ 8:30 ಗಂಟೆಗೆ ಜಲಾಲಿಯಾ ರಾತೀಬ್ ಕಾರ್ಯಕ್ರಮವು ಅಸ್ಸಯ್ಯಿದ್ ಮುಕ್ತಾರ್ ತಂಙಳ್ ಕುಂಬೋಳ್ ನೇತೃತ್ವ ದಲ್ಲಿ ನಡೆಯಲಿದೆ.
ಜ.23ರಂದು ರಾತ್ರಿ ವಾರ್ಷಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ನಡೆಯಲಿದ್ದು ನೂರುಸ್ವಾದಾತ್ ಅಸ್ವಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ತಂಙಳ್ ಭಾಗವಹಿಸಲಿದ್ದಾರೆ.
ಫೆ.1ರಂದು ರಾತ್ರಿ ಉರೂಸ್ ಸಮಾರೋಪ ಸಮಾರಂಭವು ನಡೆಯಲಿದ್ದು ಅಧ್ಯಕ್ಷತೆಯನ್ನು ಅಲ್-ಹಾಜ್ ಅಬ್ದುಲ್ ಮಜೀದ್ ಫೈಝಿ ಉಸ್ತಾದ್ ವಹಿಸಲಿದ್ದು ಅಸ್ಪಯ್ಯದ್ ಜಲಾಲುದ್ದೀನ್ ಜಮಲುಲ್ಲಲಿ ತಂಙಳ್ ಪಾತೂರ್ ಪ್ರಾರ್ಥನೆ ಗೈಯಲಿದ್ದಾರೆ. ಅಸ್ಸಯ್ಯದ್ ಬದ್ರುಸ್ವಾದಾತ್ ಇಬ್ರಾಹಿಮುಲ್ ಖಲೀಲ್ ಅಲ್ ಬುಖಾರಿ ತಂಙಳ್ ಕಡಲುಂಡಿ ಉದ್ಘಾಟಿಸಲಿ ದ್ದಾರೆ ಉಸ್ತಾದ್ ಹಾಫಿಲ್ ಮಶ್ ಹೂದ್ ಸಖಾಫಿ ಗೂಡಲ್ಲೂರ್ ಹಾಗೂ ಅಲ್-ಹಾಜ್ ಕೆ.ಪಿ ಹುಸೈನ್ ಸಆದಿ ಕೆ. ಸಿ ರೋಡ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಫೆ. 2ರಂದು ಉರೂಸ್ ಕಾರ್ಯಕ್ರಮ ನಡೆಯಲಿದ್ದು 11 ಗಂಟೆಗೆ ಮೌಲೀದ್ ಪಾರಾಯಣ ಹಾಗೂ 12 ಗಂಟೆಯಿಂದ ಸಂಜೆ 6 ತನಕ ಅನ್ನದಾನ ನಡೆಯಲಿದೆ ಎಂದರು.
ಪೊಯ್ಯತ್ತಬೈಲ್ ಜಮಾಅತ್ & ಊರೂಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್. ಎನ್, ಖಜಾಂಚಿ ಇಬ್ರಾಹಿಂ ಹಾಜಿ ಸುಳ್ಯಮೆ,ಚೆಯರ್ ಮ್ಯಾನ್ ಸಿದ್ದೀಕ್ ಹಾಜೀ ಟಿ.ಎ, ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ , ಕನ್ವೀನರ್ ಹನೀಫ್ ಪಿ ಕೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.