ಎ ಕೆ ಗ್ರೂಪ್ ನ ಅಧ್ಯಕ್ಷ ಎ ಕೆ ಅಹ್ಮದ್ ನಿಧನ
ಮಂಗಳೂರು, ಅ 8: ಪ್ರತಿಷ್ಠಿತ ಎ ಕೆ ಸಮೂಹ ಸಂಸ್ಥೆಗಳ ಸ್ಥಾಪಕರಾದ ಎ.ಕೆ. ಅಹ್ಮದ್ (76) ಅವರು ಮಂಗಳವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಹೈಲ್ಯಾಂಡ್‌ನ ಮಸ್ಜಿದ್ ಉಲ್ ಎಹ್ಸಾನ್‌ನ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಸಾಮಾಜಿಕ, ಧಾರ್ಮಿಕ ಸೇವಾ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿದ್ದರು. ಸರಳ ಸಜ್ಜನ ವ್ಯಕ್ತಿತ್ವದ ಪರೋಪಕಾರಿ ಮನೋಭಾವದವರಾಗಿದ್ದರು.
ಎ ಕೆ ಗ್ರೂಪ್ ಅನ್ನು ಪ್ರಾರಂಭಿಸಿ ಯಶಸ್ಸಿನ ಉತ್ತುಂಗಕ್ಕೆ ಒಯ್ದು ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಹ್ಮದ್ ಅವರು ಪತ್ನಿ, ನಾಲ್ಕು ಗಂಡು ಮಕ್ಕಳು ಹಾಗು ಮೂರು ಹೆಣ್ಣು ಮಕ್ಕಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಎ.ಕೆ ಅಹ್ಮದ್ ಅವರು ಎ.ಕೆ. ಸಮೂಹ ಸಂಸ್ಥೆಗಳು ಮತ್ತು ಆ್ಯಪಲ್ ಮಾರ್ಟ್ ಹೈಪರ್ ಮಾರ್ಕೆಟ್‌ನ ಆಡಳಿತ ನಿರ್ದೇಶಕರಾಗಿದ್ದರು.
ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಚ್‌ಐಎಫ್ ಇಂಡಿಯಾ ಸಂಸ್ಥೆಯ ಬೆನ್ನಲುಬಾಗಿರುವ ಅವರು ಕಳೆದ ಕೊರೋನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಹಲವರಿಗೆ ನೆರವಾಗಿದ್ದರು.
ಬುಧವಾರ ಬೆಳಗ್ಗೆ ಅಂತ್ಯ ಸಂಸ್ಕಾರ: ಅಗಲಿದ ಎ.ಕೆ ಅಹ್ಮದ್ ಅವರ ಮೃತದೇಹದ ಅಂತಿಮದರ್ಶನಕ್ಕೆ ಫಲ್ನೀರ್‌ನ ಸ್ವಗೃಹ ‘ದಾರುಲ್ ಹನಾ’ ಅವಕಾಶ ಕಲ್ಪಿಸಲಾಗಿದ್ದು, ಬುಧವಾರ ಮುಂಜಾನೆ ಫಜ್ರ್ ನಮಾಝ್ ವೇಳೆಗೆ ಬೋಳಾರ ಜುಮಾ ಮಸೀದಿಗೆ ಕೊಂಡೊಯ್ಯಲಾಗುವುದು.ಅಲ್ಲಿ 5:45ಕ್ಕೆ ಜನಾಝ ನಮಾಝ್ ಬಳಿಕ ಮಸೀದಿಯ ಖಬರಸ್ಥಾನದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಸಂತಾಪ: ಎ.ಕೆ.ಅಹ್ಮದ್ ಅವರ ನಿಧನಕ್ಕೆ ಎಚ್‌ಐಎಫ್ ಇಂಡಿಯಾ ಅಧ್ಯಕ್ಷ ಆದಿಲ್ ಪರ್ವೇಝ್, ಮಾಜಿ ಅಧ್ಯಕ್ಷ ರಿಝ್ವಾನ್ ಪಾಂಡೇಶ್ವರ, ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿಯ ಅಧ್ಯಕ್ಷ ಎ.ಅರ್. ಮುಹಮ್ಮದ್ ನಿಸ್ಸಾರ್, ಎಸ್.ಎಂ ಗ್ರೂಪ್ ಕಂಪೆನಿಯ ಚೆರ್ಮೆನ್ ಎಸ್‌ಎಂ ಫಾರೂಕ್, ಮಸ್ಜಿದ್ ಉಲ್ ಎಹ್ಸಾನ್‌ನ ಖತೀಬ್‌ರಾದ ಮೌಲಾನಾ ತಯ್ಯಬ್ ಉಸ್ತಾದ್, ಖ್ಯಾತ ವೈದ್ಯ ಡಾ.ಮುಹಮ್ಮದ್ ಇಸ್ಮಾಯೀಲ್, ಎ.ಕೆ. ಗ್ರೂಪ್ ಆಫ್ ಕಂಪನಿಯ ನಿರ್ದೇಶಕರಾದ ಅನಿಲ್ ಕುಮಾರ್ ಮತ್ತು ಡಾ. ಪ್ರಶಾಂತ್, ಅಕೋಲೈಟ್ ಇಂಡಸ್ಟ್ರೀಸ್ ನಿರ್ದೇಶಕ ಅಹ್ಮದ್ ಸಲೀಮ್, ಶಾಂತಿ ಪ್ರಕಾಶನದ ಮ್ಯಾನೇಜರ್ ಮುಹಮ್ಮದ್ ಕುಂಞಿ, ಅಂಬರ್ ಹೈಪರ್ ಮಾರ್ಕೆಟ್‌ನ ಆಡಳಿತ ನಿರ್ದೇಶಕ ಕೆಎಲ್‌ಪಿ ಯೂಸುಫ್, ಎಕ್ಯುರೆಟ್ ಪ್ಲೈವುಡ್ ಸಂಸ್ಥೆಯ ನಿರ್ದೇಶಕ ಖಾಲಿದ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಜಿಲ್ಲಾ ಅಧ್ಯಕ್ಷ ಸಿ.ಅಬ್ದುಲ್ ರಹ್ಮಾನ್ ಮತ್ತು ಕೋಶಾಧಿಕಾರಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ.