ಜ.14ರಂದು ಕೈಕಂಬದಲ್ಲಿ 'ಅಲ್ ಬಿರ್ರ್ ಕಿಡ್ಸ್ ಫೆಸ್ಟ್' ಕಾರ್ಯಕ್ರಮ
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಲೌಕಿಕ ಮತ್ತು ಧಾರ್ಮಿಕ ಸಮನ್ವಯ ವಿದ್ಯಾಭ್ಯಾಸ ನೀಡುತ್ತಿರುವ ಅಲ್ ಬಿರ್ರ್ ಶಾಲೆಯ ರಾಜ್ಯಮಟ್ಟದ ವಲಯ 1ರ ಅಲ್ ಬಿರ್ರ್ ಕಿಡ್ಸ್ ಫೆಸ್ಟ್ ಕಾರ್ಯಕ್ರಮವು ಜ.14ರಂದು ಕೈಕಂಬದ ಅಲ್ ಬಿರ್ರ್ ಸ್ಕೂಲ್ ನಲ್ಲಿ ನಡೆಯಲಿದೆ ಎಂದು ಅಲ್ ಬಿರ್ರ್ ಸಂಯೋಜಕ ಆರಿಫ್ ಕಮ್ಮಾಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ವಿಭಾಗದ 15 ಶಾಲೆಗಳ ಸುಮಾರು 600 ವಿದ್ಯಾರ್ಥಿಗಳ ವಿವಿಧ ವಿಭಾಗಗಳಲ್ಲಿ ನಡೆಯಲಿರುವ ಸ್ಪರ್ಧಾ ಕಾರ್ಯಕ್ರಮಗಳು ಅಂದು ಬೆಳಗ್ಗೆ 9ಕ್ಕೆ ಆರಂಭಗೊಳ್ಳಲಿದೆ. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಣ ಉಸ್ತಾದ್ ದುಆಗೈಯುವರು. ಅಲ್ ಬಿರ್ರ್ ಶಾಲೆಗಳ ನಿರ್ದೇಶಕ ಕೆ.ಪಿ.ಮುಹಮ್ಮದ್ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ. ಕೈಕಂಬ ಅಲ್ ಬಿರ್ರ್ ಶಾಲೆಯ ಅಧ್ಯಕ್ಷ ಆಸಿಫ್ ಹಾಜಿ ಸೂರಲ್ಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಸೈಯದ್ ಅಮೀರ್ ತಂಙಲ್ ಕಿನ್ಯ, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂ.ಎಚ್.ಮೊಯ್ದಿನ್ ಹಾಜಿ, ಗುರುಪುರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಮೆಟ್ರೋ ಶಾಹುಲ್ ಹಮೀದ್ ಹಾಜಿ, ಉದ್ಯಮಿ ಲತೀಫ್ ಗುರುಪುರ, ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯ ಅಧ್ಯಕ್ಷ ಜಮಾಲುದ್ದೀನ್ ದಾರಿಮಿ, ಸೂರಲ್ಪಾಡಿ ಜುಮಾ ಮಸೀದಿಯ ಮುದರ್ರಿಸ್ ಹೈದರ್ ದಾರಿಮಿ, ಬೈಲುಪೇಟೆ ಮುದರ್ರಿಸ್ ಆರಿಫ್ ಬಖಾವಿ ಕೊಪ್ಪ, ಪ್ರೇರಣಾ ಭಾಷಣಕಾರ ರಫೀಕ್ ಮಾಸ್ಟರ್, ಉಸ್ಮಾನ್ ಹಾಜಿ ಏರ್ ಇಂಡಿಯಾ, ಜಮೀಯ್ಯತುಲ್ ಮುಅಲ್ಲಿಮೀನ್ ಸೂರಲ್ಪಾಡಿ ರೇಂಜ್ ಅಧ್ಯಕ್ಷ ಹಂಝ ಅಸ್ತಮಿ, ಗುರುಪುರ ರೇಂಜ್ ಅಧ್ಯಕ್ಷ ಮುಸ್ತಫ ಹನೀಫಿ, ಉದ್ಯಮಿ ಶಾಫಿ ಮುಲ್ಲರಪಟ್ಣ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಅಬೂ ಸಾಲಿ ಫೈಝಿ, ಅಡ್ಡೂರು ಜುಮಾ ಮಸೀದಿಯ ಖತೀಬ್ ಸದಕತುಲ್ಲ ಫೈಝಿ, ಉದ್ಯಮಿ ಪುತ್ತುಮೋನು ಹಾಜಿ, ಕೈಕಂಬ ಶರೀಅತ್ ಕಾಲೇಜು ಅಧ್ಯಕ್ಷ ರಿಯಾಝ್ ಮಿಲನ್, ಮದ್ರಸ ಅಧ್ಯಕ್ಷ ಮಾಮು ಮಳಲಿ, ಸೂರಲ್ಪಾಡಿ ಮಸೀದಿಯ ಅಧ್ಯಕ್ಷ ಇಬ್ರಾಹೀಂ ಸಾಗರ್, ಉದ್ಯಮಿ ಇಸ್ಮಾಯೀಲ್ ರೋಯಲ್ ದವತ್, ಅಡೂರು ಅಲ್ ಬಿರ್ರ್ ಅಧ್ಯಕ್ಷ ಶೇಕ್ ಮೋನು, ಬೈಲುಪೇಟೆ ಜುಮಾ ಮಸೀದಿಯ ಅಧ್ಯಕ್ಷ ಝಕರಿಯಾ ಹಾಜಿ, ಮಳಲಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಗುರುಪುರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಚರ್ವತ್, ಉಳಾಯಿಬೆಟ್ಟು ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ರಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಲ್ ಬಿರ್ರ್ ಕಿಡ್ಸ್ ಫೆಸ್ಟ್ ಅಧ್ಯಕ್ಷ ಇಬ್ರಾಹೀಂ ಕುಕ್ಕಟ್ಟೆ, ಕೋಶಾಧಿಕಾರಿ ಎಂ.ಎಚ್. ಮುಹಿಯುದ್ದೀನ್ ಹಾಜಿ,
ಸ್ವಾಗತ ಸಮಿತಿಯ ಸದಸ್ಯರಾದ ಅಬ್ಬಾಸ್ ನಾಡಜಿ, ಬಶೀರ್ ಫ್ಲವರ್, ಜಿ.ಪಿ.ಶೇಕ್ ಮೋನು ರೈಫಲ್, ಶೇಕಬ್ ಕಂದಾವರ, ಶರೀಫ್ ಮಳಲಿ ಉಪಸ್ಥಿತರಿದ್ದರು.