ದ್ವಿಗುಣ ಆಸೆಯಿಂದ ಹೂಡಿಕೆ ಮಾಡಿದ ಹಣ ಕಳಕೊಂಡ ವ್ಯಕ್ತಿ: ಪ್ರಕರಣ ದಾಖಲು
Update: 2025-01-10 16:50 GMT
ಮಂಗಳೂರು: ಸ್ಟಾಕ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದ್ವಿಗುಣ ಮಾಡಿಕೊಡುವುದಾಗಿ ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 7.76 ಲಕ್ಷ ರೂ.ವನ್ನು ಕಳಕೊಂಡ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಗೆ ವಾಟ್ಸ್‌ಆ್ಯಪ್‌ನಲ್ಲಿ ಐಯಾಮ್ ರಾಹುಲ್ ಎಂಬ ವ್ಯಕ್ತಿ ಲಿಂಕ್ ಕಳುಹಿಸಿದ್ದು, ಆ ಲಿಂಕ್ ಕ್ಲಿಕ್ ಮಾಡಿ ಆತನ ಗ್ರೂಪ್‌ಗೆ ಸೇರ್ಪಡೆಯಾದೆ. ಬಳಿಕ ಆ ಗ್ರೂಪ್‌ನ ಅಡ್ಮಿನ್‌ಗಳಲ್ಲಿ ಒಬ್ಬಾತ ಲಿಂಕ್ ಕಳುಹಿಸಿದ. ಅದಕ್ಕೂ ತಾನು ಜಾಯಿನ್ ಆದೆ. ಸುಮಿತ್ ಸಿಂಗ್ ಎಂಬಾತ ಗ್ರೂಪ್‌ಗೆ ಸ್ವಾಗತಿಸಿ, ಸ್ಟಾಕ್ ಟಿಪ್ಸ್ ಕಳುಹಿಸಿದ್ದ. ಅದರ ಅಡ್ಮಿನ್‌ಗಳಲ್ಲಿ ಒಬ್ಬಳಾದ ಶಿವಾಸಿ ಎಂಬಾಕೆ ಹಣವನ್ನು ಹೂಡಿಕೆ ಮಾಡಿದರೆ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿದ್ದಾಳೆ. ಆಕೆಯ ಮಾತನ್ನು ನಂಬಿ ತಾನು ಹಂತ ಹಂತವಾಗಿ 7,76,265 ರೂ.ವನ್ನು ವರ್ಗಾವಣೆ ಮಾಡಿದ್ದೇನೆ ಎಂದು ಹಣಕಳಕೊಂಡ ವ್ಯಕ್ತಿಯು ದೂರಿನಲ್ಲಿ ತಿಳಿಸಿದ್ದಾರೆ.