ಬಂಟ್ವಾಳ: 'ಮುಸಾಬಖ-2023' ಸಮಾರೋಪ ಸಮಾರಂಭ

Update: 2023-12-05 10:45 GMT

ಬಂಟ್ವಾಳ: ಜೀವನದಲ್ಲಿ ಸನ್ನಡತೆ, ಧರ್ಮ ಪಾಲನೆ, ಸ್ವರ್ಗ ಪ್ರಾಪ್ತಿಗೆ ಮದರಸ ಶಿಕ್ಷಣ ಅತ್ಯಗತ್ಯವಾಗಿದ್ದು ದೇಶದಲ್ಲಿ ಮದರಸ ಶಿಕ್ಷಣದಲ್ಲಿ ಸಮಸ್ತ ಕ್ರಾಂತಿಯನ್ನು ಸೃಷ್ಟಿಸಿದೆ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನ್ ಫೈಝಿ ತೋಡಾರು ಹೇಳಿದ್ದಾರೆ.

ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಸಮಸ್ತ ಕೇರಳ ಮದರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಮಿತ್ತಬೈಲ್ ರೇಂಜ್ ವತಿಯಿಂದ ಬಿ.ಸಿ.ರೋಡ್ ಕೈಕಂಬ ಸಮೀಪದ ಪರ್ಲಿಯಾ ಖಿದ್ಮತುಲ್ ಇಸ್ಲಾಂ ಮದರಸದಲ್ಲಿ ಶನಿವಾರ ಮತ್ತು ರವಿವಾರ ನಡೆದ ಕಲಾ ಸಾಹಿತ್ಯ ಸ್ಪರ್ಧೆ 'ಮುಸಾಬಖ-2023'ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಮಸ್ತ ಮುಶಾವರ ವಿದ್ಯಾರ್ಥಿಗಳಿಗೆ, ಯುವಕರಿಗೆ, ಮದರಸಾ ಅಧ್ಯಾಪಕರಿಗೆ, ಸಮಾಜದಲ್ಲಿರುವ ಗಣ್ಯರಿಗೆ ಹೀಗೆ ಅಗತ್ಯಕ್ಕೆ ತಕ್ಕಂತೆ ವಿವಿಧ ಸಂಘಟನೆಗಳನ್ನು ರೂಪಿಸಿ ಕಾರ್ಯಾಚರಿಸುತ್ತಿದೆ. ಈ ಎಲ್ಲಾ ಸಂಘಟನೆಗಳ ಉದ್ದೇಶ ಇಸ್ಲಾಮ್ ಧರ್ಮದ ಆಶಾಯ ಆದರ್ಶವನ್ನು ಮೈಗೂಡಿಸಿ ಮುಂದಿನ ಪೀಳಿಗೆಗೂ ಇದನ್ನು ತಲುಪಿಸುವುದಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಹಮ್ಮಿಕೊಂಡಿರುವ ವಿವಿಧ ಸ್ವರ್ಧೆಗಳ ಉದ್ದೇಶ ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತೆಗೆದು ಸಮಾಜಕ್ಕೆ ಮತ್ತು ಸಮಸ್ತಕ್ಕೆ ಉತ್ತಮ ನಾಯಕರನ್ನಾಗಿ ರೂಪಿಸುವುದಾಗಿದೆ ಎಂದು ಹೇಳಿದರು.

ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ದುಅ ನೆರವೇರಿಸಿದರು. ಎಸ್.ಕೆ.ಜೆ.ಎಂ. ಮಿತ್ತಬೈಲ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಸ್ಸಯ್ಯದ್ ಬಾಸಿತ್ ಬಾಅಲವೀ ಅಲ್ ಅನ್ಸಾರಿ ಕುಕ್ಕಾಜೆ, ಎಸ್.ಕೆ.ಜೆ.ಎಂ. ದ.ಕ. ಜಿಲ್ಲಾ ಅಧ್ಯಕ್ಷ ಶಂಸುದ್ದೀನ್ ದಾರಿಮಿ, ಮಿತ್ತಬೈಲ್ ರೇಂಜ್ ಮದರಸ ಮ್ಯಾನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ನಂದರಬೆಟ್ಟು, ಪರ್ಲಿಯಾ ಅರಫಾ ಜುಮಾ ಮಸೀದಿಯ ಉಪಾಧ್ಯಕ್ಷ ಶಾಹುಲ್ ಹಮೀದ್ ಪರ್ಲಿಯಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.


ಮುಸಬಾಖ ಸ್ವಾಗತ ಸಮಿತಿ ಚೇರ್‌ಮೆನ್ ಹಾಜಿ ಮುಹಮ್ಮದ್ ಸಾಗರ್, ಮದರಸ ಮ್ಯಾನೇಜ್‌ಮೆಂಟ್ ದ.ಕ. ಜಿಲ್ಲಾಧ್ಯಕ್ಷ ಹಾಜಿ ಎಂ.ಎಚ್.ಮುಹಿಯುದ್ದೀನ್, ಮಿತ್ತಬೈಲ್ ರೇಂಜ್ ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಯೂಸುಫ್ ಬದ್ರಿಯಾ, ಎಸ್.ಕೆ.ಐ.ಎಂ.ವಿ. ಬೋರ್ಡ್ ಮುಫತ್ತಿಶ್ ಕೆ.ಎಂ.ಉಮರ್ ದಾರಿಮಿ, ಎಸ್.ಕೆ.ಜೆ.ಎಂ. ಮಿತ್ತಬೈಲ್ ರೇಂಜ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ, ಎಂ.ಜೆ.ಎಂ. ಮಿತ್ತಬೈಲ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಮುಸಾಬಖ ಸ್ವಾಗತ ಸಮಿತಿಯ ಉಪ ಕನ್ವೀನರ್ ರಫೀಕ್ ಅಸ್ಲಮಿ, ಗೂಡಿನಬಳಿ ಜುಮಾ ಮಸೀದಿ ಅಧ್ಯಕ್ಷ ಉಬೈದುಲ್ಲಾ ಹಾಜಿ, ಮಿತ್ತಬೈಲ್ ರೇಂಜ್ ಪರೀಕ್ಷಾ ಬೋರ್ಡ್ ಚೇರ್‌ಮೆನ್ ಹಾಜಿ ಅಬ್ದುಲ್ ಮಜೀದ್ ಮದನಿ ಮೊದಲಾದವರು ಉಪಸ್ಥಿತರಿದ್ದರು.

ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ನಡೆದ ಮುಸಾಬಖ - 2023 ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಮಿತ್ತಬೈಲ್ ರೇಂಜ್‌ಗೆ ಒಳಪಟ್ಟ 21 ಮದರಸಗಳ 400ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದರು. 6 ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಪ್ರಥಮ ಸ್ಥಾನ ಚಾಂಪಿಯನ್ ಪಟ್ಟವನ್ನು ಮಿತ್ತಬೈಲ್ ಮುಹ್ಯುದ್ದೀನ್ ಮದ್ರಸ ಹಾಗೂ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಪರ್ಲಿಯಾ ಖಿದ್ಮಾತುಲ್ ಇಸ್ಲಾಂ ಮದ್ರಸ ಪಡೆಯಿತು. ವಿಜೇತ ತಂಡಗಳಿಗೆ ಹಾಗೂ ವೈಯಕ್ತಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಮುಸಾಬಖ ಸ್ವಾಗತ ಸಮಿತಿ ಕನ್ವೀನರ್ ಅಬ್ದುಸ್ಸಮದ್ ಅನ್ಸಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಸಾಬಖ ಸ್ವಾಗತ ಸಮಿತಿಯ ಉಪ ಕನ್ವೀನರ್ ಅಬ್ದರ‍್ರಶೀದ್ ಯಮಾನಿ ಧನ್ಯವಾದಗೈದರು. ನಿಝಾಮುದ್ದೀನ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News