ಬಂಟ್ವಾಳ: ಉದ್ಯಮಿ ಮುಹಮ್ಮದ್ ನಾಸಿರ್ ನಿಧನ

Update: 2024-02-09 04:13 GMT

ಬಂಟ್ವಾಳ: ಸುರಿಬೈಲು ನಿವಾಸಿ , ಉದ್ಯಮಿ ಮುಹಮ್ಮದ್ ನಾಸಿರ್ (50) ಅವರು ಹೃದಯಾಘಾತದಿಂದ ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮಂಗಳೂರಿನ ಶಾಲಿಮಾರ್ ಗ್ರೂಪ್ ನ ಸಹೋದರರಲ್ಲಿ ಓರ್ವರಾದ ಇವರು, E-Man ರೆಡಿಮೇಡ್ ಮಳಿಗೆಗಳ ಮಾಲಕರಾಗಿದ್ದರು.

ಮೃತರು ಪತ್ನಿ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಸುರಿಬೈಲ್ ನ ಬದ್ರಿಯಾ ಜುಮಾ ಮಸೀದಿಯಲ್ಲಿ ಬೆಳಿಗ್ಗೆ 11:30 ಗಂಟೆಗೆ ಜುಮಾ ನಮಾಝ್ ಗೆ ಮುಂಚಿತವಾಗಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News