ಡ್ರಗ್ಸ್ ವಿರುದ್ಧ ಅಭಿಯಾನ: ಸುನ್ನೀ ಸಂಘಟನೆಗಳ ಧುರೀಣರಿಂದ ಮಂಗಳೂರು ಪೊಲೀಸ್ ಆಯುಕ್ತರ ಭೇಟಿ
ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್‌ಎಸ್‌ಎಫ್ ಸಂಘಟನೆಗನ್ನೊಳಗೊಂಡ ಸುನ್ನಿ ಕೋ ಆರ್ಡಿನೇಷನ್ ಮಂಗಳೂರು ಝೋನ್ ಸಮಿತಿ ಧುರೀಣರು ಮಂಗಳೂರು ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಅವರನ್ನು ಭೇಟಿಯಾಗಿ ಡ್ರಗ್ಸ್ ವಿರುದ್ಧ ಅಭಿಯಾನದ ಬಗ್ಗೆ ಚರ್ಚಿಸಿದರು.
ಮಂಗಳೂರು ಆಸುಪಾಸಿನ ಎಲ್ಲಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಜನಪ್ರತಿನಿಧಿ ಗಳು ಸಾಮಾಜಿಕ , ಧಾರ್ಮಿಕ , ಸಂಘಟನಾ ಪ್ರಮುಖ ನಾಯಕರನ್ನು ಆಹ್ವಾನಿಸಿ ಸಭೆಯನ್ನು ಕರೆಯಲು ವಿನಂತಿಸಲಾಯಿತು. ಅಲ್ಲದೆ ಆಗಸ್ಟ್ 19ರಂದು ಮಂಗಳೂರಲ್ಲಿ ನಡೆಯುವ ಜನಜಾಗೃತಿ ಜಾಥಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಝೋನ್ ಸುನ್ನೀ ಕೋ ಆರ್ಡಿನೇಷನ್ ಸಮಿತಿ ಅಧ್ಯಕ್ಷ ಹಾಫಿಝ್ ಯಾಕುಬ್ ಸಅದಿ ನಾವೂರು, ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ವಿ ಎ ಮುಹಮ್ಮದ್ ಸಖಾಫಿ ವಳವೂರು, ಎಸ್ ವೈ ಎಸ್ ಅಧ್ಯಕ್ಷ ಸತ್ತಾರ್ ಸಖಾಫಿ ಅಡ್ಯಾರ್ ಪದವು , ಪ್ರಧಾನ ಕಾರ್ಯದರ್ಶಿ ನಝೀರ್ ಲುಲು, ಅಶ್ರಫ್ ಪಾಳಿಲಿ, ಕಾರ್ಯದರ್ಶಿ ಆಸಿಫ್ ಸಅದಿ ಅಡ್ಯಾರ್ ಉಪಸ್ಥಿತರಿದ್ದರು.