ಮಂಗಳೂರು ಸೆಂಟ್ರಲ್ - ಮಡಗಾಂವ್ ರೈಲು ಸಂಚಾರದಲ್ಲಿ ಬದಲಾವಣೆ

Update: 2023-10-10 14:44 GMT

ಸಾಂದರ್ಭಿಕ ಚಿತ್ರ

ಮಂಗಳೂರು, ಅ.10: ಮಡಗಾಂವ್ ಮತ್ತು ಕುಮಟಾ ವಿಭಾಗದ ನಡುವಿನ ಇಂಜಿನಿಯರಿಂಗ್ ಕೆಲಸಗಳ ಕಾರಣ ಅ.12 ರಂದು ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್ - ಮಡಗಾಂವ್ ವಿಶೇಷ ರೈಲು (ನಂಬ್ರ 06602) ಕುಮಟಾ ನಿಲ್ದಾಣದ ತನಕ ಸಂಚರಿಸಲಿದೆ. ಕುಮಟಾ ಮತ್ತು ಮಡಗಾಂವ್ ನಡುವೆ ರೈಲು ಭಾಗಶಃ ರದ್ದಾಗಲಿದೆ

ಮಡಗಾಂವ್-ಮಂಗಳೂರು ಸೆಂಟ್ರಲ್ ವಿಶೇಷ ರೈಲು (ನಂಬ್ರ 06601) ಮಡಗಾಂವ್ ಬದಲಿಗೆ ಕುಮಟಾ ನಿಲ್ದಾಣದಿಂದ ಹೊರಡಲಿದೆ. ಮಡಗಾಂವ್ ಮತ್ತು ಕುಮಟಾ ನಡುವೆ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗುವುದು ಕುಮಟಾದಲ್ಲಿ ನಿಗದಿತ ನಿರ್ಗಮನ ಸಮಯ ಸಂಜೆ 4.01 ಗಂಟೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News