ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಮಂಜುನಾಥ ಭಂಡಾರಿ ಆಗ್ರಹ

Update: 2023-07-20 14:41 GMT

ಮಂಗಳೂರು, ಜು.20: ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಡಾ. ಮಂಜುನಾಥ ಭಂಡಾರಿಯವರು ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸುವಂತೆ ಆಗ್ರಹಿಸಿದ್ದಾರೆ.

‘‘ರಾಜ್ಯದಲ್ಲಿ ಶೇ.12ರಷ್ಟು ಅಕ್ರಮಕಾರ್ಡ್ ವಿತರಿಸಲಾಗಿದೆ ಮತ್ತು ಶೇ.34ರಷ್ಟು ಜನ ಕಾರ್ಡ್‌ಗಳಿಗಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 1,52,23,128 ಪಡಿತರ ಚೀಟಿದಾರರಿದ್ದಾರೆ. ಅವುಗಳಲ್ಲಿ 10,89,886 ಬಿಪಿಎಲ್‌ಕಾರ್ಡ್ ಮತ್ತು 24,09,935 ಎಪಿಎಲ್ ಕಾರ್ಡ್‌ಗಳಿವೆ. ಎಪಿಎಲ್‌ ಕಾರ್ಡ್‌ಗಳಿಗಿಂತ 5 ಪಟ್ಟು ಹೆಚ್ಚು ಬಿಪಿಎಲ್‌ ಕಾರ್ಡ್‌ಗಳಿವೆ’’ ಎಂದರು. ಇದರಲ್ಲಿ‘‘ಅರ್ಹರು ಮತ್ತು ಅನರ್ಹರು ಯಾರೆಂಬುದು ಪತ್ತೆ ಹಚ್ಚುವುದೇ ಕಷ್ಟಕರ ಇದನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಿ’’ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರವಾಗಿ ಸಚಿವ ಎನ್.ಎಸ್.ಬೋಸರಾಜು, ಆಹಾರ ಸಚಿವರಿಂದ ಉತ್ತರ ಒದಗಿಸುವುದಾಗಿ ಭರವಸೆ ನೀಡಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿಯವರು ‘‘ಇದು ತುಂಬಾ ಗಂಭೀರ ವಿಚಾರ ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ ಬೇಗ ಸಚಿವರಿಂದ ಉತ್ತರ ಕೊಡಿಸಿ’ ಎಂದು ನಿರ್ದೇಶನ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News