ಗೇರುಕಟ್ಟೆ : ಎಸ್.ಎಸ್.ಎಫ್ ರಾಷ್ಟ್ರೀಯ ಸಾಹಿತ್ಯೋತ್ಸವದ ವಿಜೇತರಿಗೆ ತವರೂರಿನ ಸ್ವಾಗತ

Update: 2024-02-20 05:27 GMT

ಬೆಳ್ತಂಗಡಿ: ಆಂಧ್ರಪ್ರದೇಶದಲ್ಲಿ ನಡೆದ ಎಸ್.ಎಸ್.ಎಫ್ ನ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದಲ್ಲಿ ಕವಾಲಿ, ಅರೇಬಿಕ್ ನಶೀದ ಹಾಗೂ ಉರ್ದು ಹಮ್ಡ್ ಸ್ಪರ್ಧೆಯ ವಿಜೇತರಾದ ಜುನೈದ್ ಪರಪ್ಪು, ಅನ್ವರ್ ಸಾದಾತ್ ಪರಪ್ಪು, ಸೈಫುಲ್ಲಾ ಪರಪ್ಪು ಇವರನ್ನು ಗೇರುಕಟ್ಟೆಯಲ್ಲಿ ಅಭೂತಪೂರ್ವವಾಗಿ ಸ್ವಾಗತಿಸಲಾಯಿತು.

ವಿಜೇತರನ್ನು ತೆರೆದ ವಾಹನದಲ್ಲಿ ಗೇರುಕಟ್ಟೆಯಿಂದ ಪರಪ್ಪು ಜಾರಿಗೆಬೈಲು ಸುಣ್ಣಲಡ್ಡ, ಮುಳ್ಳಗುಡ್ಡೆ ಬಟ್ಟೆಮಾರುವರೆಗೆ ವಾಹನ ಜಾಥಾ ನಡೆಸಲಾಯಿತು.

ಸಾಹಿತ್ಯೋತ್ಸವದಲ್ಲಿ ದೇಶದ ಹಲವಾರು ರಾಜ್ಯಗಳು ಭಾಗವಹಿಸಿದ್ದು, ಕರ್ನಾಟಕ ರಾಜ್ಯ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ತಾಜುದ್ದೀನ್ ಸಖಾಫಿ, ಅಬೂಬಕ್ಕರ್ ಹಾಜಿ, ಸಿದ್ದೀಕ್ ಮುಈನಿ, ಹಸೈನಾರ್ ಸಅದಿ, ಅಬ್ಬಾಸ್ ಹಿಶಾಮಿ, ಮುಸ್ತಫ ಹಿಮಮಿ, ಶಂಸೀರ್ ಸಖಾಫಿ, ಇಕ್ಬಾಲ್ ಮರ್ಝೂಖಿ, ಅಬ್ದುಲ್ ಕರೀಮ್, ಬಿ.ಎಂ. ಆದಂ ಹಾಜಿ, ಎನ್.ಎನ್ ಮುಹಮ್ಮದ್, ಸಿದ್ದೀಕ್ ಜಿ.ಎಚ್, ಫಯಾಝ್,ರಹಿಮಾನ್ ಮಾಸ್ಟರ್ ಹಾಗೂ ಜಮಾಅತರು, ಎಸ್ಎಸ್ಎಫ್ ನ ಸದಸ್ಯರು, ಎಸ್ ವೈ ಎಸ್, ಕೆ.ಎಮ್.ಜೆ ಯ ಪದಾಧಿಕಾರಿಗಳು, ಮದರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೊನೆಯಲ್ಲಿ ಪರಪ್ಪು ದರ್ಗಾದಲ್ಲಿ ಝಿಯಾರತ್ ನೆರವೇರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News