ಮಂಗಳೂರಿನಲ್ಲಿ ಇಂದು(ಅ.9) ವಿ.ಎಚ್.ಪಿ. 'ಶೌರ್ಯ ಯಾತ್ರೆ': ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

Update: 2023-10-09 06:57 GMT

ಮಂಗಳೂರು, ಅ.9: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳವು ಇಂದು(ಅ.9) ಅಪರಾಹ್ನ 2ರಿಂದ ಮಂಗಳೂರಿನಲ್ಲಿ 'ಶೌರ್ಯ ಯಾತ್ರೆ' ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಕ್ತಾಯದ ವರೆಗೆ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿ ಕದ್ರಿ ಸಂಚಾರ ಪೂರ್ವ ಠಾಣೆ ಪೊಲೀಸರು ಪ್ರಕಟನೆ ಹೊರಡಿಸಿದ್ದಾರೆ.

ಅದರಂತೆ ನಗರದ ಅಂಬೇಡ್ಕರ್ ವೃತ್ತ(ಜ್ಯೋತಿ ಸರ್ಕಲ್)ದಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ, ಪಿವಿಎಸ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ, ಕದ್ರಿ ಕಂಬಳ ಜಂಕ್ಷನ್ ಕಡೆಯಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ, ಮಲ್ಲಿಕಟ್ಟೆ ಕಡೆಯಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಾರ್ಯಕ್ರಮ ಮುಗಿಯುವ ವರೆಗೆ ನಿಷೇಧಿಸಲಾಗಿದೆ.

ಬದಲಿ ಸಂಚಾರ ವ್ಯವಸ್ಥೆ ಈ ಕೆಳಗಿನಂತಿರಲಿದೆ:

* ಪಡೀಲ್ ಮತ್ತು ತಲಪಾಡಿ ಕಡೆಯಿಂದ ಬರುವ ಎಲ್ಲಾ KSRTC ಬಸ್ಸುಗಳು ಪಂಪ ವೆಲ್ ಗೆ ಬಂದು ಅಲ್ಲಿಂದ ನಂತೂರು, ಕೆಪಿಟಿ ಮಾರ್ಗ ಮುಖಾಂತರ KSRTC ಬಸ್ ನಿಲ್ದಾಣಕ್ಕೆ ಅದೇರೀತಿ KSRTCಯಿಂದ ಹೊರ ಹೋಗುವ ಎಲ್ಲಾ ಬಸ್ಸುಗಳು ಕೆಪಿಟಿ, ನಂತೂರು, ಪಂಪ್ ವೆಲ್ ಮುಖಾಂತರ ಸಂಚರಿಸಬೇಕು.

* ನಂತೂರು ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಬರುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಶಿವಭಾಗ್, ಹಾರ್ಟಿಕಲ್ಟರ್, ಬೆಂದೂರು, ಕರಾವಳಿ, ಕಂಕನಾಡಿ ಜಂಕ್ಷನ್ ತಲುಪಿ ಫಳ್ನೀರ್ ರಸ್ತೆ ಮುಖಾಂತರ ಸ್ಟೇಟ್ ಬ್ಯಾಂಕ್ ಕಡೆ ಸಂಚರಿಸಬೇಕು.

* ಪಂಪ್ ವೆಲ್ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಹೋಗುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಕಂಕನಾಡಿ ಜಂಕ್ಷನಿಗೆ ಬಂದು ಫಳ್ನೀರ್ ರಸ್ತೆ ಮುಖಾಂತರ ಸ್ಟೇಟ್ ಬ್ಯಾಂಕ್ ಕಡೆಗೆ ಸಂಚರಿಸಬೇಕು.

* ಕಾವೂರು, ಬೋಂದೇಲ್ ಕಡೆಯಿಂದ ಬರುವ ಬಸ್ಸುಗಳು ಹಾಗೂ ಇತರ ವಾಹನಗಳು KSRTC, ಲಾಲ್ ಭಾಗ್, ಪಿವಿಎಸ್, ಕೆ.ಎಸ್.ಆರ್. ರಸ್ತೆ ಮುಖಾಂತರ ಹಂಪನಕಟ್ಟೆಗೆ ಬಂದು ಸ್ಟೇಟ್ ಬ್ಯಾಂಕ್ ಕಡೆಗೆ ಸಂಚರಿಸಬೇಕು.

* ಸ್ಟೇಟ್ ಬ್ಯಾಂಕ್ ಕಡೆಯಿಂದ ಉಡುಪಿ, ಮೂಡುಬಿದಿರೆ ಕಡೆಗೆ ಹೋಗುವ ಎಲ್ಲಾ ಬಸ್ಸು ಹಾಗೂ ಇತರ ವಾಹನಗಳು ಕೆ.ಎಸ್.ಆರ್. ರಸ್ತೆ ಮುಖಾಂತರ ಪಿವಿ ಸ್, ಲಾಲ್ ಬಾಗ್ ಜಂಕ್ಷನ್ ನಿಂದ ಮುಂದಕ್ಕೆ ಉಡುಪಿ ಕಡೆಗೆ ಸಂಚರಿಸಬೇಕು. ಕೆ KSRTC, ಕೆಪಿಟಿ ಮುಖಾಂತರ ಮೂಡುಬಿದಿರೆ ಕಡೆಗೆ ಸಂಚರಿಬೇಕು. ಅದೇರೀತಿ ಪುತ್ತೂರು, ತಲಪಾಡಿ, ಕಡೆಗೆ ಸಂಚರಿಸುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಹಂಪನಕಟ್ಟೆ ಜಂಕ್ಷನ್ನಿಂದ ಬಲಕ್ಕೆ ತಿರುಗಿ ಫಳ್ನೀರ್ ರಸ್ತೆ ಮುಖಾಂತರ ಕಂಕನಾಡಿ, ಕರಾವಳಿ ಜಂಕ್ಷನ್ ಮುಖೇನಾ ಸಂಚರಿಸಬೇಕು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News