ಮಂಗಳೂರು: ಕೆ.ಎಸ್.ಎ ವತಿಯಿಂದ ಡ್ರಗ್ಸ್ ವಿರುದ್ಧ ಜನಜಾಗೃತಿ ಅಭಿಯಾನ

Update: 2023-10-16 12:56 GMT

ಮಂಗಳೂರು: ಸಮಾಜಕ್ಕೆ ಮಾರಕವಾಗಿರುವ ಡ್ರಗ್ಸ್ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಸಲಫಿ ಅಸೋಸಿಯೇಷನ್‌ನ ಆಶ್ರಯದಲ್ಲಿ ಡ್ರಗ್ಸ್ ಮುಕ್ತರಾಗೋಣ ಸೃಷ್ಟಿಕರ್ತನಿಗೆ ವಿಧೇಯರಾಗೋಣ ಎಂಬ ಧೈಯ ವಾಕ್ಯದಡಿಯಲ್ಲಿ ಡ್ರಗ್ಸ್ ವಿರುದ್ಧ ಅಭಿಯಾನದ ಉದ್ಘಾಟನೆ ಪುರಭವನದಲ್ಲಿ ಇತ್ತೀಚೆಗೆ ನಡೆಯಿತು.

ಇಸ್ಲಾಮಿನ ಆಧಾರ ಪ್ರಮಾಣಗಳಾದ ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್‌ರವರ ಜೀವನ ಸಂದೇಶಗಳು ಡ್ರಗ್ಸ್ ವಿರುದ್ಧ ಮಾತನಾಡುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ತನ್ನ ಭಾಷಣದಲ್ಲಿ ಡಾ. ತಾರೀಖ್ ಸಫಿಯುರಹಮಾನ್ ಮುಬಾರಕಪುರಿ ವಿವರಿಸಿದರು.

ನಂತರ ನಡೆದ ಡ್ರಗ್ಸ್ ವಿರುದ್ಧದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಮಂಗಳೂರು ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿರುವ ಎಸ್. ಮಹೇಶ್‌ ಕುಮಾರ್‌, ಇಂದು ಸಮಾಜದಲ್ಲಿನ ಪ್ರತಿಯೊಂದು ಕುಟುಂಬದ ಸದಸ್ಯರು ಈ ಡ್ರಗ್ಸ್ ಎಂಬ ಶತ್ರುವಿನ ವಿರುದ್ಧ ಒಂದಾಗಿ ಹೋರಾಡಬೇಕಿದೆ, ಈ ನಿಟ್ಟಿನಲ್ಲಿ ತಮ್ಮ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ, ಮುಜಾಹಿದ್ ಬಾಲುಶೇರಿ, ಶಿಹಾಬ್ ಎಡಕ್ಕರ, ಹಾಫಿಜ್ ಶಾಕಿರ್ ಮದನಿ, ಇಜಾಝ್ ಸ್ವಲಾಹಿ, ಖಲೀಲ್ ತಲಪಾಡಿ ಮುಂತಾದವರು ವಿವಿಧ ವಿಷಯದಲ್ಲಿ ವಿಚಾರ ಮಂಡಿಸಿದರು.

ಬಂದರು ಪೊಲೀಸ್ ಠಾಣಾ ನಿರೀಕ್ಷಕರಾದ ಅಚ್ಯುತ್ ಅಲಿ, ಅಸ್ಪಾಕ್ ಉಳ್ಳಾಲ್, ಹಂಝ ಪುತ್ತೂರು, ಸಯ್ಯದ್ ಶಾಝ್ ಮರವೂ‌, ಮುಬಾರಕ್ ಹೊಸಂಗಡಿ, ಅಬ್ದುರಹ್ಮಾನ್ ಉಲ್ಬಾಲ್, ನಜ್‌ಮುದ್ದೀನ್‌ ಅಸ್ಸಾದಿ, ಮುಹಮ್ಮದ್ ಬಜಾಲ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಮುಹಮ್ಮದ್ ಹಫೀಝ್ ಸ್ವಲಾಹಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಬ್ದುಸಮದ್‌ ಯು.ಟಿ ಸ್ವಾಗತಿಸಿ, ಅಬ್ದುಲಾ ಫರ್‌ಹಾನ್ ಧನ್ಯವಾದಗೈದರು. ಅಹಮದ್ ಎಸ್.ಎಮ್ ಕಾರ್ಯಕ್ರಮ ನಿರೂಪಿಸಿದರು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News