ಮಂಗಳೂರು: ಸಂಘ ಪರಿವಾರದ ಕಾರ್ಯಕರ್ತರಿಂದ ಅನೈತಿಕ ಗೂಂಡಾಗಿರಿ; ಪ್ರಕರಣ ದಾಖಲು
Update: 2023-12-22 18:15 GMT
ಮಂಗಳೂರು: ನಗರದ ಹಂಪನಕಟ್ಟೆಯ ಬಳಿ ಜೊತೆಯಾಗಿ ತೆರಳುತ್ತಿದ್ದ ವಿಭಿನ್ನ ಸಮುದಾಯದ ಇಬ್ಬರಿಗೆ ಸಂಘಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ಗುರುವಾರ ನಡೆದಿರುವುದಾಗಿ ವರದಿಯಾಗಿದೆ.
ನಗರದ ಹಂಪನಕಟ್ಟೆ ಸಮೀಪದ ಮಿಲಾಗ್ರಿಸ್ ಬಳಿ ಗುರುವಾರ ಇಬ್ಬರು ಜೊತೆಯಾಗಿರುವುದನ್ನು ಗಮನಿಸಿದ ಸಂಘಪರಿವಾರದ ಕಾರ್ಯಕರ್ತರು ಪ್ರಶ್ನಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೀಡಿಯೋ ಶುಕ್ರವಾರ ವೈರಲ್ ಆಗಿದ್ದು, ಆ ಬಳಿಕ ಎಚ್ಚೆತ್ತುಕೊಂಡ ಬಂದರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.