ಮಂಗಳೂರು: ಕೇಜ್ರಿವಾಲ್ ಬಂಧನ ಖಂಡಿಸಿ ಆಪ್ ಕಾರ್ಯಕರ್ತರಿಂದ ಉಪವಾಸ ಧರಣಿ ಆರಂಭ

Update: 2024-04-07 12:35 GMT

ಮಂಗಳೂರು, ಎ.7: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ರವಿವಾರ ಆಪ್ ಕಾರ್ಯಕರ್ತರು ದೇಶಾದ್ಯಂತ ಉಪವಾಸ ಧರಣಿಗೆ ಕರೆ ನೀಡಿದ್ದು, ಅದಕ್ಕೆ ಪೂರಕವಾಗಿ ಮಂಗಳೂರು ಮಿನಿ ವಿಧಾನ ಸೌಧದ ಬಳಿ ಸಾಮೂಹಿಕ ಉಪವಾಸ ಧರಣಿ ಆರಂಭಗೊಂಡಿದೆ.

ಬೆಳಗ್ಗೆ 6:30ಕ್ಕೆ ಉಪವಾಸ ಧರಣಿ ಆರಂಭಗೊಂಡಿದ್ದು ಸಂಜೆ 6 ರವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಜಿಲ್ಲಾಧ್ಯಕ್ಷ ವಿಶು ಕುಮಾರ್, ಸಂಘಟನಾ ಕಾರ್ಯದರ್ಶಿ ಶನನ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News