ಮಂಗಳೂರು: ಕೆಎಸ್‌ಎ ಸ್ಟುಡೆಂಟ್ಸ್ ವತಿಯಿಂದ ʼಟೀನ್ಸ್ ಪಾಥ್ʼ ವಿದ್ಯಾರ್ಥಿ ಸಮ್ಮೇಳನ
ಮಂಗಳೂರು: ಕರ್ನಾಟಕ ಸಲಫಿ ಎಸೋಸಿಯೇಷನ್ ಇದರ ವಿದ್ಯಾರ್ಥಿ ಘಟಕ ಕೆಎಸ್ ಎ ಸ್ಟುಡೆಂಟ್ಸ್ ಆಯೋಜಿಸಿದ ಟೀನ್ಸ್ ಪಾಥ್ ವಿದ್ಯಾರ್ಥಿ ಸಮ್ಮೇಳನ ಟೌನ್ ಹಾಲ್ ನಲ್ಲಿ ರವಿವಾರ ನಡೆಯಿತು.
ಸಯ್ಯದ್ ಶಾಝ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಲ್ ಬಯಾನ್ ಕಾಲೇಜಿನ ಪ್ರಾಧ್ಯಾಪಕರಾದ ಶೈಖ್ ಡಾ. ತಾರಿಖ್ ಸಫಿಯುರ್ರಹ್ಮಾನ್ ಮುಬಾರಕ್'ಪುರಿಯವರು ಉದ್ಘಾಟಿಸಿದರು.
ಶೈಖ್ ರಾಝಿಕ್ ಸೌದಾಗರ್ ನಝೀರಿಯವರು ಮುಸ್ಲಿಮೇತರರೊಂದಿಗೆ ಶಾಂತಿ- ಸೌಹಾರ್ದತೆಯೊಂದಿಗೆ ಸಹ ಬಾಳ್ವೆ ನಡೆಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜನಾಬ್ ಝಾಯಿದ್ ಪಟೇಲ್ ಮುಂಬಯಿಯವರು ಮಾತನಾಡುತ್ತಾ ಊಹೆಯನ್ನು ತ್ಯಜಿಸಿರಿ ಸತ್ಯವನ್ನು ಅಂಗೀಕರಿಸಿ ಬದಲಾವಣೆಗೆ ತಯಾರಾಗಲು ಉಪದೇಶಿಸಿದರು.
ನಿಶಾದ್ ಸ್ವಲಾಹಿಯವರು ಮಾತನಾಡುತ್ತಾ ಡ್ರಗ್ಸ್ ನ ಅಪಾಯದ ಬಗ್ಗೆ ಮನಮುಟ್ಟುವ ಶೈಲಿಯಲ್ಲಿ ವಿವರಿಸಿದರು. ಡಾ. ಅಫ್ತಾಬ್ ನಝೀರ್'ರವರು ಕುರ್ ಆನ್ ಮತ್ತು ವಿಜ್ಞಾನ ಎಂಬ ವಿಷಯವನ್ನು ಆಧರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಎಮ್ ಎಲ್ ಸಿ ಮತ್ತು ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಐವನ್ ಡಿಸೋಜಾ, ಇಜಾಝ್ ಸ್ವಲಾಹಿ, ಡಾ. ಹಫೀಜ್ ಸ್ವಲಾಹಿ, ಯಾಸಿರ್ ಅಲ್ ಹಿಕಮಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.