ಅಡ್ಯಾರ್ ಕಣ್ಣೂರು: ನಸೀಮಾ ಬೀಡಿ ಮಾಲಕ ಹಾಜಿ ಅಬ್ದುಲ್ ರಹ್ಮಾನ್ ನಿಧನ

Update: 2024-11-24 07:59 IST
Photo of  Abdul Rahman Haji
  • whatsapp icon

ಮಂಗಳೂರು: ನಗರ ಹೊರವಲಯದ ಅಡ್ಯಾರ್ ಕಣ್ಣೂರು ಸಮೀಪದ ಬೋರುಗುಡ್ಡ ನಿವಾಸಿ, ನಸೀಮಾ ಬೀಡಿಯ ಮಾಲಕ ಕೆ.ಬಿ. ಅಬ್ದುಲ್ ರಹ್ಮಾನ್ ಹಾಜಿ (72) ರವಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

 ಕಣ್ಣೂರು ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾಗಿದ್ದ ಅಬ್ದುಲ್ ರಹ್ಮಾನ್ ಹಾಜಿ ಅವರು, ಕಣ್ಣೂರು ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಕಣ್ಣೂರು ಸಹಿತ ಐವರು ಪುತ್ರರು, ಆರು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News