MEIF ವತಿಯಿಂದ ಎಸ್.ಎಸ್.ಎಲ್.ಸಿ ಶಿಕ್ಷಕರಿಗೆ 2 ದಿನಗಳ ವಿಷಯವಾರು ಕಾರ್ಯಾಗಾರ

Update: 2023-11-30 14:31 GMT

ಮಂಗಳೂರು: MEIF ವತಿಯಿಂದ ಬರಾಕ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡಪಿ ಜಿಲ್ಲೆಯ ಶಾಲೆಗಳ ಎಸ್.ಎಸ್.ಎಲ್.ಸಿ ಶಿಕ್ಷಕರಿಗೆ ಎರಡು ದಿವಸದ ವಿಷಯವಾರು ತರಬೇತಿ ಕಾರ್ಯಾಗಾರವು ನ.29 ಮತ್ತು 30 ರಂದು ಬರಾಕ ವಿದ್ಯಾಸಂಸ್ಥೆ ಅಡ್ಯಾರ್ ನಲ್ಲಿ ನಡೆಯಲಿದೆ.

ಈ ಕಾರ್ಯಾಗಾರವನ್ನು ಬರಾಕ ವಿದ್ಯಾಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಬಜ್ಪೆ ಅವರು ಸಸಿಗೆ ನೀರೆರಸಿ ಶಿಕ್ಷಕರಿಗೆ ಹುರಿದುಂಬಿಸುವ ಮಾತುಗಳನ್ನಾಡುವ ಮೂಲಕ ಉದ್ಘಾಟನೆಗೊಳಿಸಿದರು.

ಕಾರ್ಯಗಾರದ ಮುಖ್ಯ ಅತಿಥಿಯಾಗಿ ಪಿ.ಎ. ಕಾಲೇಜಿನ ಪ್ರಾಂಶುಪಾಲರಾದ ಸರ್ಫ್ರಾಝ್ ಹಾಶಿಂ ಅವರು ಶಿಕ್ಷಕರಿಗೆ ಪ್ರೇರಣಾ ತರಬೇತಿ ನೀಡಿದರು.

ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶವನ್ನು ಉತ್ತಮಪಡಿಸುವ ಸಲುವಾಗಿ ಶಿಕ್ಷಕರಿಗೆ ಕಾರ್ಯಾಗಾರದಲ್ಲಿ ಗಣಿತ ಸಂಪನ್ಮೂಲ ವ್ಯಕ್ತಿಗಳಾಗಿ ಬಿಂದು ಸಿ ಆಂಟೋನಿ ಮತ್ತು ಶರತ್ ಕುಮಾರ್, ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿ ಸಯ್ಯಿದ್ ಷರೀಫ್ ಮತ್ತು ವೆಂಕಟರಮಣ ಆಚರ್ಯ, ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿ ಚಿತ್ರಾ ಶ್ರೀ, ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿಗಳಾಗಿ ಶೇರಿಲ್ ರೋಡ್ರಿಗಸ್, ಹಿಂದಿ ಸಂಪನ್ಮೂಲ ವ್ಯಕ್ತಿಗಳಾಗಿ ಕವಿತಾ ಕೆ. ಮತ್ತು ಕನ್ನಡ ಸಂಪನ್ಮೂಲ ವ್ಯಕ್ತಿಗಳಾಗಿ ರತ್ನಾಕರ ರಾವ್ ಎರಡು ದಿವಸದ ತರಬೇತಿಯನ್ನು ನಡೆಸಲಿದ್ದಾರೆ.

ಮೂಸಬ್ಬ ಪಿ ಬ್ಯಾರಿ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮುಂದಿನ ತಿಂಗಳಿಂದ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮಕ್ಕಾಗಿ ವಿದ್ಯಾರ್ಥಿಗಳಿಗೆ ಉಭಯ ಜಿಲ್ಲೆಗಳಲ್ಲಿ 10ಕ್ಕೂ ಹೆಚ್ಚು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 10 ಕೇಂದ್ರಗಳಲ್ಲಿ ಸುಮಾರು 2000ಕ್ಕೂ ಹೆಚ್ಚು ಎಸೆಸೆಲ್ಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು  ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳನ್ನು ಮೀಫ್ ಆಫೀಸ್ ಕಾರ್ಯದರ್ಶಿ ಅನ್ವರ್ ಗೂಡಿನಬಳಿ ಪರಿಚಯಿಸಿದರು. ಪ್ರ. ಕಾರ್ಯದರ್ಶಿ ರಿಯಾಝ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮ ಕಾರ್ಯದರ್ಶಿ ಶಾರಿಖ್ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಾಗಾರದಲ್ಲಿ ಸುಮಾರು 26 ಶಿಕ್ಷಣ ಸಂಸ್ಥೆಗಳಿಂದ 156 ಶಿಕ್ಷಕರು ಭಾಗವಹಿಸಿದ್ದಾರೆ.

ವಿಷಯವಾರು ತರಬೇತಿ ಕಾರ್ಯಗಾರದಲ್ಲಿ ಅತ್ಯುತ್ತಮ ಕ್ರಿಯಾಶೀಲ ಶಿಕ್ಷಕರಾಗಿ ಸಮಾಜ ವಿಜ್ಞಾನದಲ್ಲಿ ಮಂಜುಳಾ ಹಿರ ಪಬ್ಲಿಕ್ ಸ್ಕೂಲ್ ಬಬ್ಬುಕಟ್ಟೆ, ವಿಜ್ಞಾನದಲ್ಲಿ ಆಯಿಷಾ ತಸ್ನೀಮ್ ಹಿರ ಪಬ್ಲಿಕ್ ಸ್ಕೂಲ್ ಬಬ್ಬುಕಟ್ಟೆ, ಗಣಿತ ವಿಷಯದಲ್ಲಿ ಶಂಶಾದ್ ಕಣ್ಣೂರು ಇಂಗ್ಲೀಷ್ ಮೀಡಿಯಂ ಶಾಲೆ ಮತ್ತು ನಝಿಯ ಜೆಮ್ ಪಬ್ಲಿಕ್ ಸ್ಕೂಲ್ ಗೋಳ್ತಮಜಲು, ಇಂಗ್ಲೀಷ್ ವಿಷಯದಲ್ಲಿ ಕುರೈಶ ನುಸ್ರತ್ ಸ್ನೇಹ ಪಬ್ಲಿಕ್ ಸ್ಕೂಲ್ ಮತ್ತು ಶಿಮಾತ್ ಫಾತೀಮಾ ಹಿರ ಪಬ್ಲಿಕ್ ಸ್ಕೂಲ್ ಬಬ್ಬುಕಟ್ಟೆ, ಕನ್ನಡ ಸಂಗೀತ ಅನ್ಸಾರ್ ಇಂಗ್ಲೀಷ್ ಮೀಡಿಯಂ ಶಾಲೆ ಬಜ್ಪೆ ಹಾಗೂ ಹಿಂದಿ ವಿಷಯದಲ್ಲಿ ಸುಮನ ನೊಬೆಲ್ ಇಂಗ್ಲೀಷ್ ಮೀಡಿಯಂ ಶಾಲೆ ಕುಂಜತ್ಬೈಲ್ ಇವರಿಗೆ ಮೀಫ್ ವತಿಯಿಂದ ಬಹುಮಾನ ವಿತರಿಸಲಾಯಿತು.






















 






Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News